Select Your Language

Notifications

webdunia
webdunia
webdunia
webdunia

ವಮಿಕಾ ಬಗ್ಗೆ ದೊಡ್ಡ ಸೀಕ್ರೆಟ್ ಬಯಲು ಮಾಡಿದ ವಿರಾಟ್ ಕೊಹ್ಲಿ

Vamika Kohli

Krishnaveni K

ಬೆಂಗಳೂರು , ಶುಕ್ರವಾರ, 17 ಮೇ 2024 (12:37 IST)
Photo Courtesy: Twitter
ಬೆಂಗಳೂರು: ಸ್ಟಾರ್ ದಂಪತಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮುದ್ದಿನ ಮಗಳು ವಮಿಕಾ ಕೊಹ್ಲಿ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಿಗೆ ಕುತೂಹಲವಿದೆ. ಆಕೆಯ ಬಗ್ಗೆ ಕೊಹ್ಲಿಯೇ ಈಗ ಸಂದರ್ಶನದಲ್ಲಿ ದೊಡ್ಡ ಸೀಕ್ರೆಟ್ ಬಯಲು ಮಾಡಿದ್ದಾರೆ.

ಆರ್ ಸಿಬಿ ಇನ್ ಸೈಡರ್ ಮಿಸ್ಟರ್ ನಾಗ್ಸ್ ಜೊತೆ ನಡೆದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ತಮ್ಮ ಮಗಳು ವಮಿಕಾ ಮತ್ತು ಮಗ ಅಕಾಯ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದಾರೆ. ಮಿಸ್ಟರ್ ನಾಗ್ಸ್ ಫನ್ನಿ ಚ್ಯಾಟ್ ನಲ್ಲಿ ಇಬ್ಬರು ಮಕ್ಕಳ ಬಗ್ಗೆ ಕೇಳಿದ್ದಾರೆ. ಅಂತೂ ನಿಮಗೆ ಇಬ್ಬರು ಮಕ್ಕಳಾದರು. ಒಬ್ಬರು ಐಪಿಎಲ್ ಗೆ ಇನ್ನೊಬ್ಬರು ಡಬ್ಲ್ಯುಪಿಎಲ್ ಗೆ ಎಂದು ನಾಗ್ಸ್ ತಮಾಷೆ ಮಾಡುತ್ತಾರೆ.

ಬಳಿಕ ಕೊಹ್ಲಿಗೆ ವಮಿಕಾಗೆ ಕ್ರಿಕೆಟ್ ಆಸಕ್ತಿಯಿದೆಯೇ ಎಂದು ಕೇಳಿದ್ದಾರೆ. ಇದಕ್ಕೆ ಕೊಹ್ಲಿ ನನ್ನ ಮಗಳು ಈಗಾಗಲೇ ಬ್ಯಾಟ್ ತೆಗೆದುಕೊಂಡು ಬಾರಿಸುತ್ತಾಳೆ. ಈಗ ನೋಡಿದರೆ ಅವಳಿಗೆ ಬ್ಯಾಟಿಂಗ್ ಆಸಕ್ತಿಯಿದೆ ಎನಿಸುತ್ತದೆ. ಆದರೆ ಗೊತ್ತಿಲ್ಲ, ಮುಂದೇನಾಗ್ತಾಳೆ ಅಂತ. ಕೊನೆಗೆ ಅವಳಿಗೆ ಏನು ಇಷ್ಟವೋ ಅದರಂತೆ ನಡೆಯಲಿದೆ ಎಂದಿದ್ದಾರೆ. ಕೊಹ್ಲಿಯ ಮಗಳ ಕ್ರಿಕೆಟ್ ಆಸಕ್ತಿ ಬಗ್ಗೆ ತಿಳಿದು ಅಭಿಮಾನಿಗಳೂ ಅಚ್ಚರಿಗೊಂಡಿದ್ದಾರೆ.

ಇನ್ನು, ಪುತ್ರ ಅಕಾಯ್ ಕೂಡಾ ಚೆನ್ನಾಗಿದ್ದಾನೆ ಎಂದಿದ್ದಾರೆ. ಈ ಚ್ಯಾಟ್ ವೇಳೆ ವಿರಾಟ್ ಕೊಹ್ಲಿ ಥೇಟ್ ನಾಗ್ಸ್ ಶೈಲಿಯನ್ನು ಅನುಕರಿಸಿದ್ದು ಎಲ್ಲರ ಮುಖದಲ್ಲಿ ನಗು ತರಿಸಿದೆ. ಈ ಸೀಸನ್ ನಲ್ಲಿ ಇದೇ ಮೊದಲ ಬಾರಿಗೆ ಕೊಹ್ಲಿ ಮಿಸ್ಟರ್ ನಾಗ್ಸ್ ಜೊತೆಗೆ ಚ್ಯಾಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಆರ್ ಸಿಬಿ ಡ್ರೆಸ್ಸಿಂಗ್ ರೂಂಗೆ ಬಂದು ಚಹಾ ಕೇಳಿದ ಧೋನಿ