ಐಪಿಎಲ್ 2024: ಆರ್ ಸಿಬಿಗೆ ಇಂದು ಕನ್ನಡಿಗ ಕೆಎಲ್ ರಾಹುಲ್ ಸವಾಲು

Krishnaveni K
ಮಂಗಳವಾರ, 2 ಏಪ್ರಿಲ್ 2024 (10:41 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿದೆ. ಕಳೆದ ಪಂದ್ಯದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ  ಆರ್ ಸಿಬಿ ಸೋಲು ಅನುಭವಿಸಿತ್ತು. ವಿರಾಟ್ ಕೊಹ್ಲಿ ಏಕಾಂಗಿಯಾಗಿ ಹೋರಾಟ ನಡೆಸಿದ್ದರು. ಅವರ ಹೊರತಾಗಿ ಉಳಿದವರಿಂದ ತಕ್ಕ ಪ್ರದರ್ಶನ ಬರದೇ ಇರುವುದು ನಿರಾಶಾದಾಯಕವಾಗಿದೆ.

ಕ್ರಿಕೆಟ್ ಎಂದ ಮೇಲೆ ಒಬ್ಬನೇ ಆಟಗಾರನ ಮೇಲೆ ಅವಲಂಬಿತವಾಗಲು ಸಾಧ್ಯವಿಲ್ಲ. ಆದರೆ ಆರ್ ಸಿಬಿಯಲ್ಲಿ ಈಗ ಆಗುತ್ತಿರುವುದು ಇದೇ. ಬೌಲಿಂಗ್ ನಿರೀಕ್ಷಿತ ಮಟ್ಟದಲ್ಲಿಲ್ಲ. ಬ್ಯಾಟಿಂಗ್ ನಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್, ರಜತ್ ಪಾಟೀದಾರ್ ಕಳಪೆ ಫಾರ್ಮ್ ಪ್ರದರ್ಶಿಸಿದ್ದಾರೆ.

ಇತ್ತ ಲಕ್ನೋ ನಾಯಕ ಕೆಎಲ್ ರಾಹುಲ್ ಗೆ ಇದು ಅಪ್ಪಟ ತವರಿನ ಪಂದ್ಯ. ರಾಹುಲ್ ಕ್ರಿಕೆಟ್ ಆಡಿದ್ದೇ ಇಲ್ಲಿಂದ. ಹೀಗಾಗಿ ಅವರಿಗೆ ಚಿನ್ನಸ್ವಾಮಿ ಪಿಚ್ ಹೊಸದೇನಲ್ಲ. ಕಳೆದ ಪಂದ್ಯದಲ್ಲಿ ರಾಹುಲ್ ಆಡಿರಲಿಲ್ಲ. ಆದರೆ ತವರಿನಲ್ಲಿ ಆರ್ ಸಿಬಿ ಎದುರು ಆಡುವ ಅವಕಾಶವನ್ನು ಅವರು ಮಿಸ್ ಮಾಡಿಕೊಳ್ಳಲ್ಲ ಎನಿಸುತ್ತದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಗೌತಮ್ ಗಂಭೀರ್ ಹಾಯ್ ಹಾಯ್: ಸೋತ ಬೆನ್ನಲ್ಲೇ ಕೋಚ್ ಗೆ ಮೈದಾನದಲ್ಲೇ ಫ್ಯಾನ್ಸ್ ಮಂಗಳಾರತಿ Video

IND vs SA: ಗೌತಮ್ ಗಂಭೀರ್ ತೊಲಗಬೇಕು, ಇದು ಬಿಸಿಸಿಐಗೂ ತಲುಪಬೇಕು

ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು, ಎದೆ ಝಲ್ಲೆನಿಸುತ್ತದೆ, Video

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ತೆಂಬಾ ಬವುಮಾ ಪಡೆ: ಗೌತಮ್‌ ಗಂಭೀರ್‌ಗೆ ಭಾರೀ ಮುಖಭಂಗ

ಮುಂದಿನ ಸುದ್ದಿ
Show comments