Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಹರ್ಷಲ್ ಪಟೇಲ್ ಯದ್ವಾ ತದ್ವಾ ರನ್ ಬಿಟ್ಟುಕೊಟ್ಟಿದ್ದಕ್ಕೆ ಪ್ರೀತಿ ಝಿಂಟಾ ಕಾರಣ!

Priety Zinta

Krishnaveni K

ಚಂಢೀಘಡ , ಭಾನುವಾರ, 24 ಮಾರ್ಚ್ 2024 (09:34 IST)
Photo Courtesy: Twitter
ಚಂಢೀಘಡ: ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಆರ್ ಸಿಬಿ ಮಾಜಿ ವೇಗಿ ಹರ್ಷಲ್ ಪಟೇಲ್ ಮೊದಲ ಪಂದ್ಯದಲ್ಲಿಯೇ ಯದ್ವಾ ತದ್ವಾ ರನ್ ಬಿಟ್ಟು ಕೊಟ್ಟು ತೀರಾ ಟೀಕೆಗೊಳಗಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಳೆದ ಸೀಸನ್ ನಲ್ಲಿ ಆಡಿದ್ದ ಹರ್ಷಲ್ ಪಟೇಲ್ ದುಬಾರಿಯಾಗಿದ್ದಕ್ಕೆ ಭಾರೀ ಟೀಕೆಗೊಳಗಾಗಿದ್ದರು. ಈ ಬಾರಿ ಮಿನಿ ಹರಾಜಿನಲ್ಲಿ ಆರ್ ಸಿಬಿ ಅವರನ್ನು ಕೈ ಬಿಟ್ಟಿತ್ತು. ಅದಾದ ಬಳಿಕ ಪಂಜಾಬ್ ತಂಡ ಕೋಟಿ ಕೊಟ್ಟು ಅವರನ್ನು ಖರೀದಿ ಮಾಡಿತ್ತು.

ಆದರೆ ಆರ್ ಸಿಬಿಯ ಅದೇ ಕಳಪೆ ಫಾರ್ಮ್ ನ್ನು ಪಂಜಾಬ್ ನಲ್ಲಿಯೂ ಅವರು ಮುಂದುವರಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ 25 ರನ್ ಬಿಟ್ಟುಕೊಟ್ಟರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡಕ್ಕೆ ಬಂದಿದ್ದ ಡೆಲ್ಲಿಯ 19 ವರ್ಷದ ಯುವ ಬ್ಯಾಟಿಗ ಅಭಿಷೇಕ್ ಪೊರೆಲ್ ಯದ್ವಾ ತದ್ವಾ ರನ್ ಚಚ್ಚಿದ್ದರು. ಇದಾದ ಬಳಿಕ ಹರ್ಷಲ್ ಪಟೇಲ್ ಇನ್ನಿಲ್ಲದಂತೆ ಟ್ರೋಲ್ ಆಗಿದ್ದಾರೆ.

ಪಂಜಾಬ್ ಮಾಲಕಿ ಪ್ರೀತಿ ಝಿಂಟಾ ಗ್ಯಾಲರಿಯಲ್ಲಿ ಕೂತಿರುವ ಸುಂದರ ಫೋಟೋ ಹಾಕಿದ ನೆಟ್ಟಿಗರು ಹರ್ಷಲ್ ಪಟೇಲ್ ರನ್ ಲೀಕ್ ಮಾಡಲು ಪ್ರೀತಿ ಕಾರಣ ಎಂದಿದ್ದಾರೆ. ಇಷ್ಟು ವಯಸ್ಸಾದರೂ ಪ್ರೀತಿ ಝಿಂಟಾ ಇಷ್ಟು ಸುಂದರವಾಗಿ ಕಾಣುತ್ತಿದ್ದಾರೆ. ಅವರ ಸೌಂದರ್ಯ ನೋಡುತ್ತಾ ಹರ್ಷಲ್ ಬಾಲ್ ಹಾಕುವುದನ್ನೂ ಮರೆತಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ. ಇನ್ನು ಕೆಲವರು ಪಂಜಾಬ್ ಗೆ ಬಂದರೂ ಆರ್ ಸಿಬಿಯಲ್ಲಿ ತೋರಿದ ಬುದ್ಧಿ ಬಿಟ್ಟಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಕೆಕೆಆರ್ ಗೆಲುವಿನಲ್ಲಿ ಹೀರೋ ಆದ ಹರ್ಷಿತ್ ರಾಣಾ, ಆಂಡ್ರೆ ರಸೆಲ್