Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಕೆಕೆಆರ್ ಗೆ ಸನ್ ರೈಸರ್ಸ್ ಹೈದರಾಬಾದ್ ಎದುರಾಳಿ

Shreyas Iyer

Krishnaveni K

ಕೋಲ್ಕೊತ್ತಾ , ಶನಿವಾರ, 23 ಮಾರ್ಚ್ 2024 (11:40 IST)
ಕೋಲ್ಕೊತ್ತಾ: ಐಪಿಎಲ್ 2024 ರಲ್ಲಿ ಇಂದು ಎರಡು ಪಂದ್ಯ ನಡೆಯಲಿದ್ದು, ಎರಡನೇ ಪಂದ್ಯದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗುತ್ತಿದೆ.

ಕೋಲ್ಕೊತ್ತಾ ನೈಟ್ ರೈಡರ್ಸ್ ಗೆ ಈ ಆವೃತ್ತಿಯಲ್ಲಿ ನಾಯಕ ಶ್ರೇಯಸ್ ಅಯ್ಯರ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಬೆನ್ನು ನೋವಿಗೊಳಗಾಗಿದ್ದ ಅಯ್ಯರ್ ಚೇತರಿಸಿಕೊಂಡು ಇಂದು ಕಣಕ್ಕಿಳಿಯುವ ನಿರೀಕ್ಷೆಯಿದೆ. ಕೆಕೆಆರ್ ಬ್ಯಾಟಿಂಗ್ ನಲ್ಲಿ ಟಿ20 ಸ್ಪೆಷಲಿಸ್ಟ್ ಗಳ ಸಮೂಹವೇ ಇದೆ. ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಮನೀಶ್ ಪಾಂಡೆ, ನಿತೀಶ್ ರಾಣ, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್ ರಂತಹ ಪ್ರತಿಭಾವಂತರಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವರುಣ್ ಚಕ್ರವರ್ತಿ, ಶಕೀಬ್ ಅಲ್ ಹಸನ್ ರಂತಹ ಸ್ಪಿನ್ ಸ್ಪೆಷಲಿಸ್ಟ್ ಗಳ ಜೊತೆ ಮಿಚೆಲ್ ಸ್ಟಾರ್ಕ್ ರಂತಹ ಅನುಭವಿ ವೇಗಿಯ ಸಾಥ್ ಇದೆ.

ಸನ್ ರೈಸರ್ಸ್ ಹೈದರಾಬಾದ್ ಗೆ ನಾಯಕನೇ ಶಕ್ತಿ. ಆಸ್ಟ್ರೇಲಿಯಾದ ಯಶಸ್ವೀ ನಾಯಕ ಪ್ಯಾಟ್ ಕುಮಿನ್ಸ್ ತಂಡದ ಚುಕ್ಕಾಣಿ ಹಿಡಿದಿರುವುದರಿಂದ ಅದೃಷ್ಟ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಅವರ ಜೊತೆಗೆ ಹೆನ್ರಿಚ್ ಕ್ಲಾಸನ್, ಮಯಾಂಕ್ ಅಗರ್‍ವಾಲ್, ಟ್ರಾವಿಸ್ ಹೆಡ್, ಭುವನೇಶ್ವರ್ ಕುಮಾರ್, ಆಡನ್ ಮಾರ್ಕರಮ್ ಮುಂತಾದ ಅನುಭವಿಗಳ ತಂಡ ಹೈದರಾಬಾದ್ ಆಗಿದೆ. ಈ ಅನುಭವಿ ಮತ್ತು ಅನನುಭವಿಗಳ ನಡುವೆ ಗೆಲುವು ಯಾರಿಗೆ ಎಂದು ನೋಡಬೇಕಿದೆ. ಈ ಪಂದ್ಯ ರಾತ್ರಿ 7.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಪೆವಿಲಿಯನ್ ನಲ್ಲಿ ಕೂತು ರಾಹುಲ್ ಗಾಂಧಿ ಪ್ರೆಸ್ ಕಾನ್ಫರೆನ್ಸ್ ವೀಕ್ಷಿಸಿದರಾ ವಿರಾಟ್ ಕೊಹ್ಲಿ