Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಕೊಹ್ಲಿಗೆ ಬೂಸ್ಟ್ ಮಾಡಲು ಸದ್ಯದಲ್ಲೇ ಬರಲಿದ್ದಾರೆ ಅನುಷ್ಕಾಶರ್ಮಾ

Virat-Anushka

Krishnaveni K

ಬೆಂಗಳೂರು , ಶನಿವಾರ, 23 ಮಾರ್ಚ್ 2024 (13:47 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ವಿರಾಟ್ ಕೊಹ್ಲಿಗೆ ಸ್ಪೂರ್ತಿ ನೀಡಲು ಸದ್ಯದಲ್ಲಿಯೇ ಅವರ ಪತ್ನಿ ಅನುಷ್ಕಾ ಶರ್ಮಾ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅನುಷ್ಕಾ ಶರ್ಮಾ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಎರಡನೇ ಮಗುವಾದ ವಿಚಾರವನ್ನು ಕೊಹ್ಲಿ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಲಂಡನ್ ನಲ್ಲಿ ಅನುಷ್ಕಾ ಹೆರಿಗೆಯಾಗಿತ್ತು. ಇತ್ತೀಚೆಗಷ್ಟೇ ಕೊಹ್ಲಿ ಐಪಿಎಲ್ ನಲ್ಲಿ ಆಡಲು ಭಾರತಕ್ಕೆ ಬಂದಿಳಿದಿದ್ದರು.

ಇದೀಗ ವಿರಾಟ್ ಕೊಹ್ಲಿಗೆ ಸ್ಪೂರ್ತಿ ತುಂಬಲು ಅನುಷ್ಕಾ ಮೈದಾನಕ್ಕೆ ಬರಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಎರಡನೇ ಮಗುವಾದ ಬಳಿಕ ಅನುಷ್ಕಾ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ.

ಐಪಿಎಲ್ ನ ಎರಡನೇ ಹಂತದ ಪಂದ್ಯದ ವೇಳೆಗೆ ಅನುಷ್ಕಾ ಆರ್ ಸಿಬಿ ಪಂದ್ಯಗಳಿರುವ ಮೈದಾನಕ್ಕೆ ಬರಲಿದ್ದಾರೆ ಎನ್ನಲಾಗಿದೆ. ಹಿಂದೆ ಅನೇಕ ಬಾರಿ ಅನುಷ್ಕಾ ಮೈದಾನದಲ್ಲಿದ್ದು, ಪತಿ ಕೊಹ್ಲಿಗೆ ಚಿಯರ್ ಅಪ್ ಮಾಡಿದ್ದರು. ಕಳೆದ ಬಾರಿ ಏಕದಿನ ವಿಶ್ವಕಪ್ ಫೈನಲ್ ವೇಳೆ ಅನುಷ್ಕಾ ಮೈದಾನದಲ್ಲಿದ್ದರು. ಅದಾದ ಬಳಿಕ ಅವರು ಹೆರಿಗೆ ನಿಮಿತ್ತ ಲಂಡನ್ ಗೆ ತೆರಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಕೆಕೆಆರ್ ಗೆ ಸನ್ ರೈಸರ್ಸ್ ಹೈದರಾಬಾದ್ ಎದುರಾಳಿ