Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಕೆಕೆಆರ್ ಗೆಲುವಿನಲ್ಲಿ ಹೀರೋ ಆದ ಹರ್ಷಿತ್ ರಾಣಾ, ಆಂಡ್ರೆ ರಸೆಲ್

Andre Russell

Krishnaveni K

ಕೋಲ್ಕೊತ್ತಾ , ಭಾನುವಾರ, 24 ಮಾರ್ಚ್ 2024 (09:18 IST)
Photo Courtesy: Twitter
ಕೋಲ್ಕೊತ್ತಾ: ಐಪಿಎಲ್ 2024 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕೋಲ್ಕೊತ್ತಾ ನೈಟ್ ರೈಡರ್ಸ್ ಕೊನೆಯ ಓವರ್ ನಲ್ಲಿ ರೋಚಕ ಗೆಲುವು ಕಂಡಿದೆ.

ಹರ್ಷಿತ್ ರಾಣಾ ಕೊನೆಯ ಓವರ್ ನಲ್ಲಿ ಬಿಗುವಿನ ದಾಳಿ ನಡೆಸಿ ಕೆಕೆಆರ್ ಗೆ 4 ರನ್ ಗಳ ರೋಚಕ ಗೆಲುವು ತಂದಿತ್ತರು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಮಧ್ಯಮ ಕ್ರಮಾಂಕ ಕೈ ಕೊಟ್ಟು ತಂಡ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಬಿರುಗಾಳಿಯಂತೆ ಬ್ಯಾಟಿಂಗ್ ನಡೆಸಿದ ಆಂಡ್ರೆ ರಸೆಲ್ ಕೇವಲ 25 ಎಸೆತಗಳಲ್ಲಿ 7 ಸಿಕ್ಸರ್ ಸಹಿತ ಅಜೇಯ 64 ರನ್ ಚಚ್ಚಿದರು. ಕೇವಲ 20 ಎಸೆತಗಳಲ್ಲಿ ಅವರು ಅರ್ಧಶತಕ ಪೂರೈಸಿದ್ದರು.

ಕೆಕೆಆರ್ ನೀಡಿ 209 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಹೈದರಾಬಾದ್ ಆರಂಭ ಉತ್ತಮವಾಗಿಯೇ ಇತ್ತು. ಮೊದಲ ವಿಕೆಟ್ ಗೆ ಕೇವಲ 5 ಓವರ್ ಗಳಲ್ಲಿ ತಂಡ 60 ರನ್‍ ಗಳಿಸಿತ್ತು. ಆದರೆ 32 ರನ್ ಗಳಿಸುವಷ್ಟರಲ್ಲಿ ಮಯಾಂಕ್ ಅಗರ್ವಾಲ್ ಔಟಾದರು. ಕೆಲವೇ ಕ್ಷಣಗಳಲ್ಲಿ ಅಭಿಷೇಕ್ ಶರ್ಮ ಕೂಡಾ ಅಷ್ಟೇ ರನ್ ಗಳಿಸಿ ಔಟಾದರು. ಕೆಳ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸನ್ 29 ಎಸೆತಗಳಲ್ಲಿ 63 ರನ್ ಸಿಡಿಸಿ ತಂಡವನ್ನು ಗೆಲುವಿನ ದಡದವರೆಗೂ ಕೊಂಡೊಯ್ದರು.

ಆದರೆ ಕೊನೆಯ ಓವರ್ ನಲ್ಲಿ ಹೈದರಾಬಾದ್ ಗೆ 13 ರನ್ ಬೇಕಾಗಿತ್ತು. ಈ ವೇಳೆ ದಾಳಿಗಿಳಿದ ಹರ್ಷಿತ್ ರಾಣಾ ಯಶಸವಿಯಾಗಿ ರನ್ ಡಿಫೆಂಡ್ ಮಾಡಿದರು. ಕೊನೆಯ ಓವರ್ ನಲ್ಲಿ ಅದ್ಭುತ ದಾಳಿ ಮಾಡಿದ ಹರ್ಷಿತ್ ಕೇವಲ 8 ರನ್ ನೀಡಿ ಎರಡು ವಿಕೆಟ್ ಕೂಡಾ ಕಬಳಿಸಿದರು. ಇದರೊಂದಿಗೆ ಹೈದರಾಬಾದ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಲಷ್ಟೇ ಶಕ್ತವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಪಂಜಾಬ್ ಕಿಂಗ್ಸ್ ಗೆ ಮೊದಲ ಗೆಲುವು, ಹೈದರಾಬಾದ್ ವಿರುದ್ಧ ಕೆಕೆಆರ್ ಬ್ಯಾಟಿಂಗ್ ಕುಸಿತ