Select Your Language

Notifications

webdunia
webdunia
webdunia
webdunia

IPL 2024: ಅಸಮಾಧಾನ ಬದಿಗಿಟ್ಟು ಅಂತೂ ಮುಂಬೈ ಇಂಡಿಯನ್ಸ್ ಸೇರಿಕೊಂಡ ಜಸ್ಪ್ರೀತ್ ಬುಮ್ರಾ

Jasprit Bumrah

Krishnaveni K

ಮುಂಬೈ , ಶುಕ್ರವಾರ, 22 ಮಾರ್ಚ್ 2024 (11:17 IST)
Photo Courtesy: Twitter
ಮುಂಬೈ: ಐಪಿಎಲ್ 2024 ಇನ್ನೇನು ನಾಳೆಯಿಂದ ಪ್ರಾರಂಭವಾಗಲಿದೆ. ಆದರೆ ಜಸ್ಪ್ರೀತ್ ಬುಮ್ರಾ ಮಾತ್ರ ಇನ್ನೂ ಮುಂಬೈ ಇಂಡಿಯನ್ಸ್ ಪಾಳಯ ಸೇರಿಕೊಂಡಿಲ್ಲ ಎಂಬ ಅಪವಾದವಿತ್ತು. ಅದೀಗ ನಿವಾರಣೆಯಾಗಿದೆ.

ಮುಂಬೈ ಇಂಡಿಯನ್ಸ್ ಈ ಬಾರಿ ರೋಹಿತ್ ಶರ್ಮಾರನ್ನು ಕಿತ್ತೊಗೆದು ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದೆ. ಇದು ತಂಡದೊಳಗೇ ಅಸಮಾಧಾನಕ್ಕೆ ಕಾರಣವಾಗಿದೆ. ರೋಹಿತ್ ಶರ್ಮಾಗೇ ಇದು ಬೇಸರ ತರಿಸಿದೆ. ಹಾಗಿದ್ದರೂ ರೋಹಿತ್ ಈಗಾಗಲೇ ಮುಂಬೈ ಪಾಳಯ ಸೇರಿಕೊಂಡು ಅಭ್ಯಾಸ ಶುರು ಮಾಡಿದ್ದಾರೆ. ಆದರೆ ಬುಮ್ರಾ ಸೇರಿಕೊಂಡಿರಲಿಲ್ಲ. ಹೀಗಾಗಿ ಬುಮ್ರಾ ಅಸಮಾಧಾನ ಕಾರಣದಿಂದಲೇ ತಂಡಕ್ಕೆ ಬಂದಿಲ್ಲ ಎನ್ನಲಾಗಿತ್ತು.

ಆದರೆ ಹಾರ್ದಿಕ್ ರನ್ನು ನಾಯಕರಾಗಿ ಮಾಡಿ ತನ್ನನ್ನು ಕಡೆಗಣಿಸಿದ್ದು ಬುಮ್ರಾಗೆ ತೀವ್ರ ಅಸಮಾಧಾನವುಂಟು ಮಾಡಿತ್ತು. ಈ ಕಾರಣಕ್ಕೆ ಬುಮ್ರಾ ಬೇರೆ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಗುಸು ಗುಸುಗಳೂ ಕೇಳಿಬಂದಿದ್ದವು. ಹಾಗಿದ್ದರೂ ಅವರು ಮುಂಬೈ ಜೊತೆಗೇ ಉಳಿದುಕೊಂಡರು.

ಆದರೂ ಈಗಾಗಲೇ ಬಹುತೇಕ ಆಟಗಾರರು ತಂಡ ಕೂಡಿಕೊಂಡರೂ ಬುಮ್ರಾ ಮಾತ್ರ ತನಗೆ ಇನ್ನೂ ವಿಶ್ರಾಂತಿ ಬೇಕಿದೆ ಎಂದು ತಂಡಕ್ಕೆ ಬಂದಿರಲಿಲ್ಲ. ಹೀಗಾಗಿ ಮುಂಬೈಯ ಆರಂಭಿಕ ಪಂದ್ಯಗಳಿಗೆ ಅವರು ಅಲಭ್ಯರಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಬುಮ್ರಾ ಮುಂಬೈ ಪಾಳಯ ಸೇರಿಕೊಂಡಿರುವ ಸುದ್ದಿ ಬಂದಿದೆ. ಹೀಗಾಗಿ 24 ರಂದು ನಡೆಯಲಿರುವ ಮೊದಲ ಪಂದ್ಯಕ್ಕೂ ಲಭ್ಯರಾಗುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024 ಕ್ಕೆ ಇಂದು ಚಾಲನೆ: ಉದ್ಘಾಟನೆಗೆ ಬರುವ ಅತಿಥಿಗಳ ಲಿಸ್ಟ್