Publish Date: Tue, 19 Mar 2024 (12:18 IST)
Updated Date: Tue, 19 Mar 2024 (12:21 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಐಪಿಎಲ್ ನ ತಮ್ಮ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಕ್ಷಣಗಳನ್ನು ರೋಹಿತ್ ಹಂಚಿಕೊಂಡಿದ್ದಾರೆ.
ರೋಹಿತ್ ಶರ್ಮಾ ಐಪಿಎಲ್ ನ ಯಶಸ್ವೀ ನಾಯಕ. ಆದರೆ ಈ ಬಾರಿ ಮುಂಬೈ ಇಂಡಿಯನ್ಸ್ ರೋಹಿತ್ ರನ್ನು ಕಿತ್ತು ಹಾಕಿ ಹಾರ್ದಿಕ್ ಪಾಂಡ್ಯರನ್ನು ನಾಯಕನಾಗಿ ಮಾಡಿದೆ. ಆದರೆ ಇದು ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ರೋಹಿತ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮುಂಬೈ ತಂಡ ಮತ್ತು ಹಾರ್ದಿಕ್ ರನ್ನು ಟ್ರೋಲ್ ಮಾಡುತ್ತಲೇ ಇದೆ.
ಈ ನಡುವೆ ಇಂದು ರೋಹಿತ್ ಅಭ್ಯಾಸ ನಡೆಸುತ್ತಿರುವ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮುಂಬೈ ಕಾ ರಾಜ ರೋಹಿತ್ ಶರ್ಮಾ ಎಂದು ಹೊಗಳಿದ್ದಾರೆ. ರೋಹಿತ್ ನೆಟ್ಸ್ ನಲ್ಲಿ ಭರ್ಜರಿ ಹೊಡೆತಗಳ ಮೂಲಕ ಐಪಿಎಲ್ ಗೆ ತಯಾರಿ ನಡೆಸುತ್ತಿದ್ದಾರೆ.
ನಮಗೆ ಯಾವತ್ತಿದ್ದರೂ ನೀವೇ ನಾಯಕ ಎಂದು ಮುಂಬೈ ಅಭಿಮಾನಿಗಳು ರೋಹಿತ್ ಫೋಟೋಗಳನ್ನು ನೋಡಿ ಕಾಮೆಂಟ್ ಮಾಡಿದ್ದಾರೆ. ಈ ಬಾರಿ ನಾಯಕತ್ವದ ಜವಾಬ್ಧಾರಿಯಿಲ್ಲದೇ ರೋಹಿತ್ ಇನ್ನಷ್ಟು ಎದುರಾಳಿಗಳ ಪಾಲಿಗೆ ಸಿಂಹಸ್ವಪ್ನರಾಗಬಹುದು.
Krishnaveni K
Publish Date: Tue, 19 Mar 2024 (12:18 IST)
Updated Date: Tue, 19 Mar 2024 (12:21 IST)