Select Your Language

Notifications

webdunia
webdunia
webdunia
webdunia

IPL 2024: ವಿರಾಟ್ ಕೊಹ್ಲಿಗಾಗಿ ಹಲಸಿನ ಹಣ್ಣು ಗಿಫ್ಟ್ ತಂದ ಅಭಿಮಾನಿ

Kohli

Krishnaveni K

ಬೆಂಗಳೂರು , ಶನಿವಾರ, 18 ಮೇ 2024 (14:03 IST)
Photo Courtesy: Instagram
ಬೆಂಗಳೂರು: ಐಪಿಎಲ್ 2024 ರಲ್ಲಿ ಇಂದು ಸಿಎಸ್ ಕೆ ವಿರುದ್ಧ ಮಹತ್ವದ ಪಂದ್ಯವಾಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶುಭ ಕೋರಲು ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬರು ವಿಶಿಷ್ಟ ಗಿಫ್ಟ್ ನೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ.

ವಿರಾಟ್ ಕೊಹ್ಲಿ ಅಪ್ಪಟ ಅಭಿಮಾನಿಯಾಗಿರುವ, ರೈತ ಅಂಬರೀಶ್ ಎಂಬವರು ಆರ್ ಸಿಬಿ ಮತ್ತು ವಿರಾಟ್ ಕೊಹ್ಲಿ ಅಪ್ಪಟ ಅಭಿಮಾನಿಗಳು. ಇಂದು ಮಹತ್ವದ ಪಂದ್ಯವಾಡಲಿರುವ ಕೊಹ್ಲಿಗೆ ವಿಶ್ ಮಾಡಲು ಅಂಬರೀಶ್ ಹಲಸಿನ ಹಣ್ಣಿನೊಂದಿಗೆ ಬಂದಿದ್ದಾರೆ.

ವಿಶ್ವ ಪ್ರಸಿದ್ಧ ತೂಬಗೆರೆಯ ಹಲಸಿನ ಹಣ್ಣನ್ನು ಹೊತ್ತುಕೊಂಡು ಕೊಹ್ಲಿಗೆ ಗಿಫ್ಟ್ ನೀಡಲು ಯೋಜನೆ ಹಾಕಿಕೊಂಡಿದ್ದಾರೆ. ಕೊಹ್ಲಿಯನ್ನು ಭೇಟಿ ಮಾಡಿ ಹಲಸಿನ ಹಣ್ಣು ನೀಡಿ ತಂಡಕ್ಕೆ ವಿಶ್ ಮಾಡಬೇಕು ಎಂದು ಬಯಕೆ ವ್ಯಕ್ತಪಡಿಸಿದ್ದಾರೆ. ಅವರ ಬಯಕೆ ಈಡೇರುತ್ತದೋ ಗೊತ್ತಿಲ್ಲ.

ಆದರೆ ಅಭಿಮಾನಿಯ ಅಭಿಮಾನ ಜೊತೆಗೆ ಹಳ್ಳಿ ರೈತನ ಮುಗ್ಧತನ ನೋಡಿ ಅಭಿಮಾನಿಗಳು ಮನಸೋತಿದ್ದಾರೆ. ಕೇವಲ ಕೊಹ್ಲಿಗೆ ಮಾತ್ರವಲ್ಲ, ಇಂದು ಹುಟ್ಟುಹಬ್ಬ ಆಚರಿಸುತ್ತಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೂ ಈಗಾಗಲೇ ಈ ಹಲಸಿನ ಹಣ್ಣು ನೀಡಿ ವಿಶ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾಗೆ ವಿದಾಯ ಹೇಳಿದ ಮುಂಬೈ ಪ್ರೇಕ್ಷಕರು