Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಅಂಕಲ್ ನ ಹೊಡಿತೀವಿ ಸುಬ್ಬಿ ಅಂತಿದ್ದಾರೆ ಆರ್ ಸಿಬಿ ಫ್ಯಾನ್ಸ್

Dhoni-Kohli

Krishnaveni K

ಬೆಂಗಳೂರು , ಶನಿವಾರ, 18 ಮೇ 2024 (09:36 IST)
Photo Courtesy: Twitter
ಬೆಂಗಳೂರು: ಐಪಿಎಲ್ 2024 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಮೈದಾನದಲ್ಲಿ ಸಿಎಸ್ ಕೆ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವಾಡುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮೀಮ್ಸ್, ಮೆಮೆಗಳು ಎಲ್ಲರ ಗಮನ ಸೆಳೆಯುತ್ತಿದೆ.

ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಧೋನಿ ಮತ್ತು ಕೊಹ್ಲಿ ಫೋಟೋ ಹಾಕಿ ‘ಮೇ 18 ಕ್ಕೆ ಅಂಕಲ್ ನ ಹೊಡಿತೀವಿ ಸುಬ್ಬಿ’ ಎಂಬ ಡೈಲಾಗ್ ನ ಮೆಮೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಡಾಲಿ ಧನಂಜಯ್ ಅವರ ಫೇಮಸ್ ಡೈಲಾಗ್ ಇದು. ಆರ್ ಸಿಬಿ ಫ್ಯಾನ್ಸ್ ಈಗ ಇದನ್ನೇ ವೇದ ವಾಕ್ಯ ಮಾಡಿಕೊಂಡಿದ್ದಾರೆ.

ಇನ್ನು ಕೆಲವು ಅಭಿಮಾನಿಗಳು ಈ ಪಂದ್ಯ ಗೆದ್ದರೆ ಆರ್ ಸಿಬಿ ಖಂಡಿತಾ ಈ ಸಲ ಕಪ್ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಅಲ್ಲದೆ, 18 ಎಂಬುದನ್ನು ಕುರುಕ್ಷೇತ್ರ ಯುದ್ಧಕ್ಕೆ ಹೋಲಿಸಿ ಇದು ನಮಗೆ ಶುಭ ಸಂಖ್ಯೆ ಎನ್ನುತ್ತಿದ್ದಾರೆ. ಅದಕ್ಕೆ ತಕ್ಕಂತೆ ಆರ್ ಸಿಬಿ ಕೂಡಾ ಈ ದಿನ ಒಂದೇ ಒಂದು ಪಂದ್ಯ ಸೋತಿಲ್ಲ.

ಆರ್ ಸಿಬಿಯದ್ದು ಈ ಬಾರಿ ಸ್ಪೂರ್ತಿದಾಯಕ ಜರ್ನಿಯಾಗಿದೆ. ಆರಂಭದಲ್ಲಿ ಪೇಲವವಾಗಿದ್ದ ತಂಡ ಈಗ ಪ್ಲೇ ಆಫ್ ಗೆ ಅರ್ಹತೆ ಪಡೆಯಲು ಪೈಪೋಟಿ ನೀಡುತ್ತಿರುವುದು ನಿಜಕ್ಕೂ ಸಾಧನೆಯೇ ಸರಿ. ಹೀಗಾಗಿ ಈ ಸಲ ಆರ್ ಸಿಬಿ ಕಪ್ ಗೆಲ್ಲಲು ಯಶಸ್ವಿಯಾದರೆ ಅದು ಸ್ಮರಣೀಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಆರ್ ಸಿಬಿ ವರ್ಸಸ್ ಸಿಎಸ್ ಕೆ ಪಂದ್ಯಕ್ಕೆ ಮಳೆ ಬಂದರೆ ಏನಾಗಲಿದೆ