ಹೈದರಾಬಾದ್: ಐಪಿಎಲ್ 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ತಕ್ಕ ಸಮಯದಲ್ಲೇ ಆರ್ ಸಿಬಿ ಗೆದ್ದು ಪ್ಲೇ ಆಫ್ ಕನಸು ಜೀವಂತವಾಗಿರಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆಎ 186 ರನ್ ಗಳಿಸಿತ್ತು. ಹೈದರಾಬಾದ್ ಪರ ಕ್ಲಾಸನ್ 104 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಕೊಹ್ಲಿ 63 ಎಸೆತಗಳಿಂದ ಭರ್ತಿ 100 ರನ್ ಗಳಿಸಿ ಔಟಾದರು. ತಕ್ಕ ಸಾಥ್ ನೀಡಿದ ನಾಯಕ ಫಾ ಡು ಪ್ಲೆಸಿಸ್ 71 ರನ್ ಗಳಿಸಿದರು.