Publish Date: Thu, 18 May 2023 (17:18 IST)
Updated Date: Thu, 18 May 2023 (17:20 IST)
ಮುಂಬೈ: ಐಪಿಎಲ್ 2023 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯವಾಡಲಿದೆ.
ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತರೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಲಾಭವಾಗಲಿದೆ.
ಆರ್ ಸಿಬಿ ಇಂದು ಗೆದ್ದರೆ ಮಾತ್ರ ಪ್ಲೇ ಆಫ್ ರೇಸ್ ನಲ್ಲಿ ಉಳಿಯಲಿದೆ. ಒಂದು ವೇಳೆ ಸೋತರೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಹಾದಿ ಸುಗಮವಾಗಲಿದೆ. ಹೀಗಾಗಿ ಇಂದು ಆರ್ ಸಿಬಿ ಸೋಲಲಿ ಎಂದು ಲಕ್ನೋ ಮತ್ತು ಚೆನ್ನೈ ಪ್ರಾರ್ಥಿಸುತ್ತಿದೆ.