Publish Date: Thu, 18 May 2023 (08:44 IST)
Updated Date: Thu, 18 May 2023 (08:46 IST)
ಹೈದರಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮಹತ್ವದ ಪಂದ್ಯವಾಡಲಿದೆ. ಈ ಪಂದ್ಯವನ್ನು ಆರ್ ಸಿಬಿ ಗೆಲ್ಲಲೇಬೇಕಿದೆ.
ಪ್ಲೇ ಆಫ್ ದೃಷ್ಟಿಯಿಂದ ಆರ್ ಸಿಬಿಗೆ ಈ ಪಂದ್ಯ ಮಹತ್ವದ್ದಾಗಿದೆ. ಹೀಗಾಗಿ ಇಂದಿನ ಪಂದ್ಯಕ್ಕಾಗಿ ಆರ್ ಸಿಬಿ ಕಠಿಣ ತಯಾರಿಯನ್ನೇ ಮಾಡಿಕೊಂಡಿದೆ.
ಈ ನಡುವೆ ನೆಟ್ಸ್ ನಲ್ಲಿ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಬೌಲಿಂಗ್ ಅಭ್ಯಾಸ ನಡೆಸುವುದು ಕಂಡುಬಂದಿದೆ. ಹೀಗಾಗಿ ಕೊಹ್ಲಿ ಇಂದು ಬೌಲಿಂಗ್ ಮಾಡಬಹುದು ಎಂದು ಊಹಿಸಲಾಗಿದೆ. ಕೊಹ್ಲಿ ಅಪರೂಪಕ್ಕೆ ಬೌಲಿಂಗ್ ನಡೆಸುತ್ತಾರೆ. ಐಪಿಎಲ್ ನಲ್ಲಿ 13 ಪಂದ್ಯಗಳಲ್ಲಿ ಕೊಹ್ಲಿ ಬೌಲಿಂಗ್ ಮಾಡಿದ್ದಾರೆ. ಹೀಗಾಗಿ ಇಂದೂ ಅವರ ಬೌಲಿಂಗ್ ನೋಡುವ ಭಾಗ್ಯ ಪ್ರೇಕ್ಷಕರಿಗೆ ಸಿಕ್ಕರೆ ಅಚ್ಚರಿಯಿಲ್ಲ.