Publish Date: Fri, 14 Apr 2023 (08:50 IST)
Updated Date: Fri, 14 Apr 2023 (09:15 IST)
ಕೋಲ್ಕೊತ್ತಾ: ಐಪಿಎಲ್ 2023 ರಲ್ಲಿ ಇಂದು ಕೋಲ್ಕೊತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ನಡೆಯಲಿದೆ.
ಕಳೆದ ಪಂದ್ಯದಲ್ಲಿ ಕೆಕೆಆರ್ ಪ್ರಬಲ ಗುಜರಾತ್ ಟೈಟನ್ಸ್ ವಿರುದ್ಧ ಪಡೆದ ಗೆಲುವನ್ನು ಯಾರೂ ಮರೆಯಲು ಸಾಧ‍್ಯವಿಲ್ಲ. ರಿಂಕು ಸಿಂಗ್ ಕೊನೆಯ ಓವರ್ ನಲ್ಲಿ ಐದು ಸಿಕ್ಸರ್ ಸಿಡಿಸಿ ಅಸಾಧ‍್ಯ ಗೆಲುವನ್ನು ಸಾಧ‍್ಯವಾಗಿಸಿದ್ದರು. ಇದೇ ಹುಮ್ಮಸ್ಸಿನಲ್ಲಿ ಕೆಕೆಆರ್ ಇಂದು ಮತ್ತೊಂದು ಪಂದ್ಯಕ್ಕೆ ಸಜ್ಜಾಗಲಿದೆ.
ಇನ್ನೊಂದೆಡೆ ಹೈದರಾಬಾದ್ ಸತತ ಸೋಲುಗಳ ನಂತರ ಕಳೆದ ಪಂದ್ಯದಲ್ಲಿ ಗೆಲುವು ಕಂಡಿತ್ತು. ಅದೇ ಗೆಲುವಿನ ಓಟವನ್ನು ಮುಂದುವರಿಸುವ ನಿರೀಕ್ಷೆಯಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.