Publish Date: Thu, 13 Apr 2023 (09:40 IST)
Updated Date: Thu, 13 Apr 2023 (09:52 IST)
ಮುಂಬೈ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾರನ್ನು ಕ್ರಿಕೆಟ್ ಜಗತ್ತಿನಲ್ಲಿ ಹಿಟ್ ಮ್ಯಾನ್ ಎಂದೇ ಗುರುತಿಸುತ್ತಾರೆ.
ಇಂತಿಪ್ಪ ಹಿಟ್ ಮ್ಯಾನ್ ಪಕ್ಕಾ ಮಹಾರಾಷ್ಟ್ರದ ಅಡುಗೆಗಳನ್ನು ಬಹಳವಾಗಿ ಇಷ್ಟಪಡುತ್ತಾರೆ. ಅವರ ಫೇವರಿಟ್ ಫುಡ್ ಎಂದರೆ ವಡಾ ಪಾವ್ ಎಂದು ಎಲ್ಲರಿಗೂ ಗೊತ್ತು. ಅವರ ದೇಹ ತೂಕದ ಬಗ್ಗೆ ಕೆಲವರು ವಡಾ ಪಾವ್ ಎಂದು ಕಿಚಾಯಿಸುವುದೂ ಇದೆ.
ಇದರ ಹೊರತಾಗಿ ರೋಹಿತ್ ಫೇವರಿಟ್ ಆಹಾರವೆಂದರೆ ಪೂರನ್ ಪೋಳಿ, ಕೊತ್ತಿಂಬಿರ್ ವಡೈ, ಮಿಸಲ್ ಪಾವ್ ಎಂದು ರೋಹಿತ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.