Publish Date: Thu, 13 Apr 2023 (08:20 IST)
Updated Date: Thu, 13 Apr 2023 (08:28 IST)
ಮೊಹಾಲಿ: ಐಪಿಎಲ್ 2023 ರಲ್ಲಿ ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಪಂದ್ಯ ನಡೆಯಲಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಸತತ ಗೆಲುವಿನಿಂದ ಉಬ್ಬಿಹೋಗಿತ್ತು. ಆದರೆ ಕಳೆದ ಪಂದ್ಯದಲ್ಲಿ ಅನಿರೀಕ್ಷಿತ ಸೋಲು ಎದುರಾಗಿತ್ತು. ಅದೂ ಕೆಕೆಆರ್ ಬ್ಯಾಟಿಂಗ್ ರಿಂಕು ಸಿಂಗ್ ಸಿಕ್ಸರ್ ಏಟನ್ನು ಗುಜರಾತ್ ಗೆ ಮರೆಯಲು ಕಷ್ಟವಾಗಬಹುದು. ಇದರ ನಡುವೆಯೇ ಇಂದು ಮತ್ತೆ ಗೆಲುವು ಕಾಣುವ ವಿಶ್ವಾಸದಲ್ಲಿದೆ.
ಆದರೆ ಪಂಜಾಬ್ ಸುಲಭ ಎದುರಾಳಿಯಲ್ಲ. ಪಂಜಾಬ್ ಕೂಡಾ ಸತತ ಗೆಲುವಿನ ಬಳಿಕ ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಆದರೆ ಪಂಜಾಬ್ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಪ್ರಬಲವಾಗಿದೆ. ಹೀಗಾಗಿ ಈ ಪಂದ್ಯ ಸಮಾನರ ಪಂದ್ಯವಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ನಡೆಯಲಿದೆ.