ಧರ್ಮಶಾಲಾ: ಐಪಿಎಲ್ 2023 ಲೀಗ್ ಪಂದ್ಯಗಳು ನಿರ್ಣಾಯಕ ಘಟ್ಟ ತಲುಪಿದ್ದು, ಇಂದು ಪಂಜಾಬ್ ಕಿಂಗ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ.
ಇಂದಿನ ಪಂದ್ಯವನ್ನು ಪಂಜಾಬ್ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಒಂದು ವೇಳೆ ಇಂದು ಸೋತರೆ ಅಧಿಕೃತವಾಗಿ ಕೂಟದಿಂದ ನಿರ್ಗಮಿಸಲಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಡೆಲ್ಲಿ ವಿರುದ್ಧ ಸೋತು ಸಂಕಷ್ಟಕ್ಕೆ ಸಿಲುಕಿತ್ತು.
ಇತ್ತ ರಾಜಸ್ಥಾನ್ ಪರಿಸ್ಥಿತಿಯೂ ಹೆಚ್ಚು ಕಡಿಮೆ ಅದೇ ರೀತಿ ಇದೆ. ಸಂಜು ಸ್ಯಾಮ್ಸನ್ ಬಳಗ ಆರಂಭದಲ್ಲಿ ಅಬ್ಬರಿಸಿದರೂ ನಡುವೆ ಮಂಕಾಗಿತ್ತು. ಇದರಿಂದಾಗಿ ಆಡಿದ 13 ಪಂದ್ಯಗಳಿಂದ 6 ಗೆಲುವು ಸಂಪಾದಿಸಿದೆಯಷ್ಟೇ. ಕಳೆದ ಪಂದ್ಯವನ್ನು ಸೋತಿರುವ ರಾಜಸ್ಥಾನ್ ಇಂದು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ನಡೆಯುವುದು.