Publish Date: Wed, 03 May 2023 (08:00 IST)
Updated Date: Wed, 03 May 2023 (08:35 IST)
ಲಕ್ನೋ: ಐಪಿಎಲ್ 2023 ರಲ್ಲಿ ಇಂದು ಎರಡು ಪಂದ್ಯ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಪಂದ್ಯ ನಡೆಯಲಿದೆ.
ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರ್ ಸಿಬಿ ವಿರುದ್ಧ ಸೋಲು ಅನುಭವಿಸಿತ್ತು. ಗಂಭೀರ್ ಮೆಂಟರ್ ಆಗಿರುವ ಲಕ್ನೋ ಇದುವರೆಗೆ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದೆ. ಇದುವರೆಗೆ ಆಡಿದ 9 ಪಂದ್ಯಗಳ ಪೈಕಿ 5 ರಲ್ಲಿ ಗೆಲುವು ಸಾಧಿಸಿದೆ. ಗಾಯಗೊಂಡಿರುವ ನಾಯಕ ಕೆಎಲ್ ರಾಹುಲ್ ಇಂದಿನ ಪಂದ್ಯಕ್ಕೆ ಲಭ್ಯರಾಗುತ್ತಾರಾ ನೋಡಬೇಕು.
ಅತ್ತ ಚೆನ್ನೈ ಕಳೆದ ಎರಡು ಪಂದ್ಯಗಳಿಂದ ಸತತ ಸೋಲು ಅನುಭವಿಸಿ ಚಿಂತೆಯಲ್ಲಿದೆ. ಹಾಗಿದ್ದರೂ ಚೆನ್ನೈ 9 ಪಂದ್ಯಗಳಿಂದ 5 ಗೆಲುವು ಸಾಧಿಸಿದೆ. ಚೆನ್ನೈ ಬೌಲಿಂಗ್ ಸುಧಾರಿಸಿದರೆ ಲಕ್ನೋ ಕಟ್ಟಿ ಹಾಕಬಹುದು. ಈ ಪಂದ್ಯ ಅಪರಾಹ್ನ 3.30 ಕ್ಕೆ ನಡೆಯಲಿದೆ.