Webdunia - Bharat's app for daily news and videos

Install App

ಭಾರತದಲ್ಲಿ ಅವಕಾಶ ಸಿಗದೆ ಐರ್ಲೆಂಡ್ ತಂಡ ಸೇರಿದ ಭಾರತದ ಕ್ರಿಕೆಟಿಗ..!

Webdunia
ಸೋಮವಾರ, 11 ಸೆಪ್ಟಂಬರ್ 2017 (19:53 IST)
ಭಾರತೀಯ ಕ್ರಿಕೆಟ್`ನಲ್ಲಿ ಸ್ಪರ್ಧೆ ಜಾಸ್ತಿ. ಪ್ರತಿಭೆಗೆ ತಕ್ಕ ಅವಕಾಶ ಸಿಗುವುದಿಲ್ಲ ಎಂಬ ಆರೋಪವೂ ಇದೆ. ಈ ಆರೋಪಕ್ಕೆ ಇಂಬು ನೀಡುವಂತೆ ಪಂಜಾಬ್`ನ ಪ್ರತಿಭಾವಂತ ಕ್ರಿಕೆಟಿಗನೊಬ್ಬ ಭಾರತದಲ್ಲಿ ಅವಕಾಶ ಸಿಗದೇ ಐರ್ಲೆಂಡ್ ತಂಡ ಸೇರಿದ್ದಾನೆ.

ಪಂಜಾಬ್ ಮೂಲದ ಸಿಮರಂಜೀತ್ ಸಿಂಗ್ ಎಂಬಾತ ಐರ್ಲೆಂಡ್ ರಾಷ್ಟ್ರೀಯ ತಂಡ ಸೇರಿದ್ದಾರೆ. ಸಿಮರಂಜೀತ್ ಸಿಂಗ್ ಪೋಷಕರು ಮೊಹಾಲಿಯಲ್ಲೇ ನೆಲೆಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್`ಗೆ ಪಾದಾರ್ಪಣೆ ಮಾಡಿದ್ದ ಸಿಮರಂಜೀತ್ ಸಿಂಗ್, ಸೆಪ್ಟೆಂಬರ್ 13ರಂದು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕೈಕ ಏಕದಿನ ಪಂದ್ಯದಲ್ಲೂ ಆಡುತ್ತಿದ್ದಾರೆ. ಐರ್ಲೆಂಡ್`ಗೆ ಟೆಸ್ಟ್ ಮಾನ್ಯತೆಯೂ ಸಿಕ್ಕಿದ್ದು, ಸಿಮರಂಜೀತ್ ಸಿಂಗ್ ಅವರ ಟೆಸ್ಟ್ ಆಡುವ ಅಭಿಲಾಷೆಯೂ ಈಡೇರಲಿದೆ.
ಭಾರತದ ಪರ ನಾನು ಅಂತಾರಾಷ್ಟ್ರೀಯ ಪಂದ್ಯ ಆಡುವುದಿಲ್ಲ. ಐರ್ಲೆಂಡ್ ತಂಡದಲ್ಲಿ ಸದ್ಯದಲ್ಲೇ ಟೆಸ್ಟ್ ಆಡಲಿದ್ದೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ತಮ ಆಟವಿದ್ದರೂ ಅಂಡರ್-19 ತಂಡಕ್ಕೆ ಆಯ್ಕೆ ಮಾಡಲಿಲ್ಲ: ಭಾರತದ ಅಂಡರ್-14 ಮತ್ತು ಅಂಡರ್-17 ತಂಡವನ್ನ ಪ್ರತಿನಿಧಿಸಿದ್ದ ಸಿಮರಂಜೀತ್ ಸಿಂಗ್ ಅತ್ಯುತ್ತಮವಾಗಿ ಆಡಿದ್ದರು.  2001ರಲ್ಲಿ ವಿಜಯವಾಡದಲ್ಲಿ ನಡೆದ ನ್ಯಾಶನಲ್ ಸ್ಕೂಲ್ ಗೇಮ್ಸ್`ನಲ್ಲಿ ಸಿಮರಂಜೀತ್ ಸಿಂಗ್ ಬೆಸ್ಟ್ ಪ್ಲೇಯರ್ ಗೌರವಕ್ಕೆ ಪಾತ್ರರಾಗಿದ್ದರು. ಆದರೂ ಅಂಡರ್-19 ತಂಡಕ್ಕೆ ಆಯ್ಕೆ ಮಾಡುವಲ್ಲಿ ಪರಿಗಣಿಸಲಿಲ್ಲ.

ಭಾರತ ತಂಡದಲ್ಲಿ ಆಡಬೇಕೆಂಬ ಕುಟುಂಬದ ಕನಸು ನನಸಾಗದಿದ್ದಾಗ ನೋವಿನಿಂದಲೇ ಸಿಮರಂಜೀತ್ ಸಿಂಗ್ ಹೋಟೆಲ್ ಮ್ಯಾನೇಜ್ ಮೆಂಟ್ ಒದಲು ಐರ್ಲಂಡ್`ಗೆ ತೆರಳಿದರು. ಈ ಸಂದರ್ಭ ಗೆಳೆಯ ಗೌರವ್ ಹೇಳಿದಂತೆ ಐರ್ಲೆಂಡ್ ಕ್ರಿಕೆಟ್ ತಂಡದಲ್ಲಿ ಅವಕಾಶವಿರುವುದು ಸೀಮರಂಜೀತ್ ಸಿಂಗ್ ಗಮನಕ್ಕೆ ಬಂದಿತು. ಈ ಸಂದರ್ಭ ಸೀಮರಂಜೀತ್ ಸಿಂಗ್ ವೀಕೆಂಡ್`ನಲ್ಲಿ ಪಂದ್ಯಕ್ಕೆ 5 ಯೂರೋ ನೀಡಿ ಆಡಲಾರಂಭಿಸಿದರು. ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೀಮರಂಜೀತ್ ಸಿಂಗ್ ಅದರಿಂದಲೇ ಹಣ ಹೊಂದಿಸುತ್ತಿದ್ದರು. ಬಳಿಕ ಕೌಂಟಿ ಪಂದ್ಯದಲ್ಲಾಡಿದ ಸಿಂಗ್ 2008ರಲ್ಲಿ ಭಾರತಕ್ಕೆ ಬಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಟ್ರಯಲ್`ನಲ್ಲಿ ಭಾಗವಹಿಸಿದ್ದರು. ಆದರೆ, ತಂಡದಲ್ಲಿ ಸ್ಥಾನ ಸಿಗಲಿಲ್ಲ. ಬಳಿಕ ಡಬ್ಲಿನ್`ಗೆ ವಾಪಸ್ಸಾದ ಸೀಮರಂಜೀತ್ ಸಿಂಗ್ ಸಕ್ಲೈನ್ ಮುಸ್ತಾಕ್ ಬೌಲಿಂಗ್ ವಿಡಿಯೋ ನೋಡಿ ಸ್ಪಿನ್ ಬೌಲಿಂಗ್ ಆರಂಭಿಸಿದರು. ಲೈಸೆಸ್ಟರ್ ಸೀನಿಯರ್ ಕಪ್`ನಲ್ಲಿ 56 ವಿಕೆಟ್ ಉರುಳಿಸಿದ್ದಲ್ಲದೆ, 786 ರನ್ ಹೊಡೆಯುವ ಮೂಲಕ ಆಲ್ರೌಂಡರ್ ಪ್ರದರ್ಶನ ನೀಡಿದರು. ಈ ಅದ್ಬುತ ಪ್ರದರ್ಶನ ಸಿಂಗ್`ಗೆ ಐರ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಲಿಉ ನೆರವಾಗಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments