Select Your Language

Notifications

webdunia
webdunia
webdunia
webdunia

INDW vs AUSW: ಆಸ್ಟ್ರೇಲಿಯಾ ಗೆಲುವಿಗೆ 177 ರನ್ ಗಳ ಗುರಿ ನೀಡಿದ ಭಾರತ ತಂಡ

Smriti Mandhana-Jemimah Rodrigues
Photo Credit: X
ಅಡಿಲೇಡ್: ಆಸ್ಟ್ರೇಲಿಯಾಗೆ ಮೂರನೇ ಟಿ20 ಪಂದ್ಯ ಗೆಲ್ಲಲು ಭಾರತ ಮಹಿಳಾ ತಂಡ 177 ರನ್ ಗಳ ಸವಾಲಿನ ಗುರಿ ನೀಡಿದೆ. ಈ ಪಂದ್ಯ ಗೆದ್ದವರು ಸರಣಿ ತಮ್ಮದಾಗಿಸಿಕೊಳ್ಳಲಿದ್ದಾರೆ.

ಇಂದು ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕಿ ಹರ್ಮನ್ ಪ್ರೀತ್ ಕೌರ್ ಆಯ್ಕೆ ಸಮರ್ಥಿಸುವಂತೆ ಆಡಿದ ಸ್ಮೃತಿ ಮಂಧಾನ ಮತ್ತು ಜೆಮಿಮಾ ರೊಡ್ರಿಗಸ್ ಶತಕದ ಜೊತೆಯಾಟವಾಡಿದರು. ಶಫಾಲಿ ವರ್ಮ 7 ರನ್ ಗಳಿಸಿ ಔಟಾದರೂ ಈ ಇಬ್ಬರು ಸ್ನೇಹಿತೆಯರು ಭಾರತವನ್ನು ಸುಭದ್ರ ಸ್ಥಿತಿಗೆ ಕೊಂಡೊಯ್ದರು.

ಈ ಪೈಕಿ ಸ್ಮೃತಿ ಮಂಧಾನ 55 ಎಸೆತಗಳಿಂದ 8 ಬೌಂಡರಿ, 3 ಸಿಕ್ಸರ್ ಸಹಿತ 82 ರನ್ ಗಳಿಸಿ ಔಟಾದರು. ಇನ್ನೊಂದೆಡೆ ಜೆಮಿಮಾ ರೊಡ್ರಿಗಸ್ 46 ಎಸೆತಗಳಿಂದ 59 ರನ್ ಗಳಿಸಿದರು. ರಿಚಾ ಘೋಷ್ ಎಂದಿನಂತೆ 7 ಎಸೆತಗಳಿಂದ 18 ರನ್ ಚಚ್ಚಿ ಪೆವಿಲಿಯನ್ ಸೇರಿಕೊಂಡರು.

ಕೊನೆಯ ಓವರ್ ಗಳಲ್ಲಿ ಭಾರತಕ್ಕೆ ನಿರೀಕ್ಷಿಸಿದಷ್ಟು ರನ್ ಬರಲಿಲ್ಲ. ಸತತ ವಿಕೆಟ್ ಕಳೆದುಕೊಂಡಿದ್ದರಿಂದ ಅಂತಿಮವಾಗಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಶಕ್ತವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

INDWvsAUSW: ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಹರ್ಮನ್ ಪ್ರೀತ್ ಕೌರ್ ಪಡೆ