Publish Date: Fri, 06 Feb 2026 (20:35 IST)
Updated Date: Fri, 06 Feb 2026 (20:37 IST)
ಹರಾರೆ: ಅಂಡರ್ 19 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡವನ್ನು 100 ರನ್ ಗಳಿಂದ ಸೋಲಿಸಿ ಭಾರತ ತಂಡ ಆರನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಬೀಗಿದೆ.
ಇಂದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 411 ರನ್ ಗಳಿಸಿತ್ತು. ಇದು ವಿಶ್ವಕಪ್ ಫೈನಲ್ ನಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿತ್ತು. ವೈಭವ್ ಸೂರ್ಯವಂಶಿ 175 ರನ್ ಗಳ ಭರ್ಜರಿ ಇನಿಂಗ್ಸ್ ಆಡಿದ್ದರು.
ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 40.2 ಓವರ್ ಗಳಲ್ಲಿ 311 ರನ್ ಗಳಿಸಿ ಆಲೌಟ್ ಆಗಿದೆ. ಇಂಗ್ಲೆಂಡ್ ಪರ ಫಾಲ್ಕನೂರ್ 67 ಎಸೆತಗಳಲ್ಲಿ 115 ರನ್ ಗಳಿಸಿ ದಿಟ್ಟ ಹೋರಾಟ ನೀಡಿದರು. ಅವರ ಹೊರತಾಗಿ ಆರಂಭಿಕ ಬೆನ್ ಡಾಕಿನ್ಸ್ 66, ಬೆನ್ ಮೇಸ್ 45 ರನ್ ಗಳ ಕೊಡುಗೆ ನೀಡಿದರು.
ಭಾರತದ ಪರ ಅಂಬ್ರೀಶ್ 3, ದೀಪೇಶ್ ದೇವೇಂದ್ರನ್, ಕನಿಷ್ಕ್ ಚೌಹಾಣ್ ತಲಾ 2 ವಿಕೆಟ್ ಕಬಳಿಸಿದರು. ಇದರೊಂದಿಗೆ ಭಾರತ ಆರನೇ ಬಾರಿಗೆ ಅಂಡರ್ 19 ವಿಶ್ವ ಚಾಂಪಿಯನ್ ಆಗಿದೆ. ಇದಕ್ಕೆ ಮೊದಲು 2000, 2008, 2012,2018 ಮತ್ತು 2022 ರಲ್ಲಿ ಭಾರತ ಅಂಡರ್ 19 ವಿಶ್ವಕಪ್ ಗೆದ್ದಿತ್ತು.