Select Your Language

Notifications

webdunia
webdunia
webdunia
webdunia

PM Modi video: ಏರ್ ಪೋರ್ಟ್ ನಲ್ಲಿ ಸಿಕ್ಕ ವೈಭವ್ ಸೂರ್ಯವಂಶಿಯ ಪಕ್ಕದ್ಮನೆಯವನಂತೆ ಮಾತನಾಡಿಸಿದ ಮೋದಿ

PM Modi, Vaibhav Suryavamshi

Krishnaveni K

ನವದೆಹಲಿ , ಶುಕ್ರವಾರ, 30 ಮೇ 2025 (14:52 IST)
Photo Credit: X
ನವದೆಹಲಿ: ಇತ್ತೀಚೆಗೆ ಐಪಿಎಲ್ 2025 ರಲ್ಲಿ ಶತಕ ಸಿಡಿಸಿ ದಾಖಲೆ ಮಾಡಿದ್ದ 14 ವರ್ಷದ ಹಾಲುಗಲ್ಲದ ಕ್ರಿಕೆಟಿಗ ವೈಭವ್ ಸೂರ್ಯವಂಶಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ. ಈ ಕ್ಷಣದ ವಿಡಿಯೋ ಈಗ ವೈರಲ್ ಆಗಿದೆ.

ವೈಭವ್ ಸೂರ್ಯವಂಶಿ ಇತ್ತೀಚೆಗೆ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ 38 ಎಸೆತಗಳಲ್ಲಿ ಅಬ್ಬರದ ಶತಕ ಸಿಡಿಸಿ ವಿಶ್ವದ ಗಮನ ಸೆಳೆದಿದ್ದರು. ಆಗ ಪ್ರಧಾನಿ ಮೋದಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈಭವ್ ಸಾಹಸವನ್ನು ಕೊಂಡಾಡಿದ್ದರು.

ಇದೀಗ ಪ್ರಧಾನಿ ಮೋದಿ ಬಿಹಾರ ಭೇಟಿ ವೇಳೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಅಕಸ್ಮಾತ್ತಾಗಿ ವೈಭವ್ ಸೂರ್ಯವಂಶಿಯನ್ನು ಭೇಟಿಯಾಗಿದ್ದಾರೆ. ಅವರ ಜೊತೆಗೆ ಅವರ ಪೋಷಕರೂ ಇದ್ದರು. ವೈಭವ್ ನನ್ನು ಗುರುತಿಸಿದ ಮೋದಿ ಆತ್ಮೀಯವಾಗಿ ಮಾತನಾಡಿಸಿದ್ದಾರೆ.

ವೈಭವ್ ಪೋಷಕರ ಬಳಿಯೂ ಆತನ ಕ್ರಿಕೆಟ್ ಆಸಕ್ತಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರೂ ಮಗನ ಬಗ್ಗೆ ವಿವರಣೆ ನೀಡಿದ್ದಾರೆ. ಮೋದಿ ಕೂಡಾ ಪಕ್ಕದ್ಮನೆ ಹುಡುಗನ ಮಾತನಾಡಿಸುವಂತೆ ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಈ ವೇಳೆ ಮೋದಿ ಕಾಲಿಗೆ ವೈಭವ್ ನಮಸ್ಕರಿಸಿದ್ದು, ಮೋದಿ ಕೂಡಾ ಬೆನ್ನುತಟ್ಟಿ ಶುಭ ಹಾರೈಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಐಪಿಎಲ್‌ ಫೈನಲ್‌ಗೆ ಲಗ್ಗೆ ಹಾಕಿದ ಆರ್‌ಸಿಬಿಗೆ ತಂಡದ ಮಾಜಿ ಮಾಲೀಕ ವಿಜಯ್‌ ಮಲ್ಯ ಸ್ಪೇಷಲ್‌ ವಿಶ್‌