ಬಾರ್ಬಡೋಸ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಜುಲೈ 12 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಯ ನೇರಪ್ರಸಾರ ಯಾವ ಚಾನೆಲ್ ನಲ್ಲಿ ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ.
ಸ್ಟಾರ್ ಸ್ಪೋರ್ಟ್ಸ್, ಸೋನಿ ಸೇರಿದಂತೆ ಯಾವುದೇ ಚಾನೆಲ್ ನಲ್ಲಿ ಈ ಸರಣಿಯ ನೇರಪ್ರಸಾರ ಇರುವುದಿಲ್ಲ. ಬದಲಾಗಿ ಟಿವಿಯಲ್ಲೇ ನೋಡಬಯಸುವವರು ಡಿಡಿ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.
ಇನ್ನು ಆಪ್ ಮುಖೇನ ನೋಡಲು ಬಯಸಿದರೆ ಜಿಯೋ ಆಪ್ ನಲ್ಲಿ ಪಂದ್ಯ ವೀಕ್ಷಿಸಬಹುದಾಗಿದೆ. ಅದರ ಹೊರತಾಗಿ ಫ್ಯಾನ್ ಕೋಡ್ ಆಪ್ ಮೂಲಕ ಪಂದ್ಯ ವೀಕ್ಷಿಸಬಹುದಾಗಿದೆ. ಟೆಸ್ಟ್ ಸರಣಿ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 7.30 ಕ್ಕೆ, ಟಿ20 ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭವಾಗಲಿದೆ.