ಮುಂಬೈ: ಟೀಂ ಇಂಡಿಯಾ ಆಯ್ಕೆ ಸಮಿತಿಗೆ ನೂತನ ಮುಖ್ಯಸ್ಥರಾಗಿ ಮಾಜಿ ವೇಗಿ ಅಜಿತ್ ಅಂಗರ್ಕರ್ ಆಯ್ಕೆಯಾಗಿದ್ದಾರೆ.
ಅಜಿತ್ ಆಯ್ಕೆಯಾಗಿರುವ ಬಗ್ಗೆ ಬಿಸಿಸಿಐ ಅಧಿಕೃತ ಪ್ರಕಟಣೆ ನೀಡಿದೆ. ಜುಲೈ 5 ರಿಂದಲೇ ಅಜಿತ್ ಅಗರ್ಕರ್ ಮುಖ್ಯಸ್ಥರಾಗಿರುವ ನೂತನ ಸಮಿತಿಯ ಅಧಿಕಾರಾವಧಿ ಆರಂಭವಾಗಿದೆ.
ಖಾಸಗಿ ವಾಹಿನಿಯೊಂದು ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಚೇತನ್ ಶರ್ಮಾರನ್ನು ಮುಖ್ಯ ಆಯ್ಕೆಗಾರ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಅವರಿಂದ ತೆರವಾದ ಸ್ಥಾನಕ್ಕೆ ಅಜಿತ್ ಅಗರ್ಕರ್ ಅವರನ್ನು ನೇಮಿಸಲಾಗಿದೆ.