Publish Date: Thu, 06 Jul 2023 (09:00 IST)
Updated Date: Thu, 06 Jul 2023 (09:22 IST)
ಬೆಂಗಳೂರು: ರಸ್ತೆ ಅಪಘಾತದಿಂದಾಗಿ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಗೆ ಸದ್ಯಕ್ಕೆ ಕೀಪಿಂಗ್ ಮಾಡಲು ಕಷ್ಟವೆನ್ನಲಾಗಿದೆ.
ರಿಷಬ್ ಲಘು ಪ್ರಮಾಣದಲ್ಲಿ ವ್ಯಾಯಾಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಅವರು ನೋವು ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಅವರು ತಮ್ಮ ಪ್ರಯತ್ನ ಬಿಟ್ಟಿಲ್ಲ.
ಮೂಲಗಳ ಪ್ರಕಾರ ರಿಷಬ್ ಕೆಲವು ದಿನಗಳಲ್ಲಿ ಚೇತರಿಸಿಕೊಂಡು ತಂಡಕ್ಕೆ ಕಮ್ ಬ್ಯಾಕ್ ಮಾಡಿದರೂ ಕೀಪಿಂಗ್ ಮಾಡುವುದು ಕಷ್ಟ. ಕೇವಲ ಬ್ಯಾಟಿಗನಾಗಿ ಅಷ್ಟೇ ಕೆಲವು ದಿನ ಆಡಬೇಕಾಗಬಹುದು. ಕಾಲು ಸಂಪೂರ್ಣವಾಗಿ ಗುಣಮುಖವಾಗುವವರೆಗೂ ಅವರು ಕೀಪಿಂಗ್ ನಡೆಸುವುದು ಕಷ್ಟ.
ಈ ಹಿಂದೆ ಹಾರ್ದಿಕ್ ಪಾಂಡ್ಯ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಹಲವು ಸಮಯ ಕೇವಲ ಬ್ಯಾಟಿಗನಾಗಿ ಆಡಿದ್ದರು. ಬೌಲಿಂಗ್ ಸಾಧ್ಯವಾಗಿರಲಿಲ್ಲ. ಅದೇ ರೀತಿ ರಿಷಬ್ ಕೂಡಾ ನಿಧಾನವಾಗಿ ಕೀಪಿಂಗ್ ಗೆ ಮರಳಬೇಕಷ್ಟೇ ಎನ್ನಲಾಗಿದೆ.