Select Your Language

Notifications

webdunia
webdunia
webdunia
webdunia

IND vs SA test: ಮೈದಾನದಲ್ಲಿ ‘ರಾಮ’ನಾದ ವಿರಾಟ್ ಕೊಹ್ಲಿ

IND vs SA test: ಮೈದಾನದಲ್ಲಿ ‘ರಾಮ’ನಾದ ವಿರಾಟ್ ಕೊಹ್ಲಿ
ಕೇಪ್ ಟೌನ್ , ಗುರುವಾರ, 4 ಜನವರಿ 2024 (08:20 IST)
Photo Courtesy: Twitter
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಮೊದಲನೇ ದಿನದಾಟದ ವೇಳೆ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರಭು ಶ್ರೀರಾಮಚಂದ್ರನ ಅವತಾರ ತಾಳಿದ್ದಾರೆ!

ಫೀಲ್ಡಿಂಗ್ ಮಾಡುತ್ತಿದ್ದಾಗ ಕೊಹ್ಲಿ ಶ್ರೀರಾಮನಂತೆ ಆಕ್ಟ್ ಮಾಡಿದ್ದಾರೆ. ಆಫ್ರಿಕಾ ಬ್ಯಾಟಿಗ ಕೇಶವ್ ಮಹಾರಾಜ್ ಕ್ರೀಸ್ ಗೆ ಬಂದಾಗ ಪ್ರತೀ ಬಾರಿ ಆದಿ ಪುರುಷ್ ಸಿನಿಮಾದ ರಾಮ್ ಸಿಯಾ ರಾಮ್ ಹಾಡು ಹಾಕುತ್ತಾರೆ.

ಈ ಬಾರಿಯೂ ಕೇಶವ್ ಮೈದಾನಕ್ಕೆ ಬರುವಾಗ ಈ ಹಾಡನ್ನು ಹಾಕಿದ್ದಾರೆ. ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ ಕೊಂಚ ಫನ್ನಿ ಮೂಡ್ ನಲ್ಲಿದ್ದರು. ಹೀಗಾಗಿ ಶ್ರೀರಾಮನಂತೆ ಬಿಲ್ಲು ಬಿಡುವ ರೀತಿ ನಟನೆ ಮಾಡಿ ಬಳಿಕ ಕೈ ಮುಗಿದು ಶ್ರೀರಾಮಚಂದ್ರನಿಗೆ ನಮಿಸಿದ್ದಾರೆ.

ಕೊಹ್ಲಿಯ ಈ ಆಕ್ಟ್ ಎಲ್ಲರ ಗಮನ ಸೆಳೆದಿದೆ. ಟೆಸ್ಟ್ ಕ್ರಿಕೆಟ್ ಬೋರ್ ಆಗದಂತೆ ಕೊಹ್ಲಿ ಈ ರೀತಿ ಮೈದಾನದಲ್ಲಿ ಪ್ರೇಕ್ಷಕರನ್ನು ಅನೇಕ ರೀತಿ ರಂಜಿಸಿದ್ದಾರೆ. ಈ ಬಾರಿಯೂ ಅವರ ನಟನೆಯನ್ನು ಪ್ರೇಕ್ಷಕರು ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs SA: ಬಿರುಗಾಳಿಯಾದ ಸಿರಾಜ್, ತರಗೆಲೆಯಾದ ಆಫ್ರಿಕಾ