Select Your Language

Notifications

webdunia
webdunia
webdunia
webdunia

IND vs SA: ಬಿರುಗಾಳಿಯಾದ ಸಿರಾಜ್, ತರಗೆಲೆಯಾದ ಆಫ್ರಿಕಾ

IND vs SA: ಬಿರುಗಾಳಿಯಾದ ಸಿರಾಜ್, ತರಗೆಲೆಯಾದ ಆಫ್ರಿಕಾ
ಕೇಪ್ ಟೌನ್ , ಬುಧವಾರ, 3 ಜನವರಿ 2024 (16:10 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಬಿರುಗಾಳಿಯಂತ ದಾಳಿಗೆ ತರಗೆಲೆಯಾದ ಆಫ್ರಿಕಾ ಕೇವಲ ಮೊದಲ ಇನಿಂಗ್ಸ್ ಕೇವಲ 55 ರನ್ ಗಳಿಗೆ ಆಲೌಟ್ ಆಗಿದೆ.

ಟಾಸ್ ಗೆದ್ದ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೆ ಕೇವಲ 5 ರನ್ ಗಳಿಸಿದ್ದಾಗಲೇ ಆರಂಭಿಕ ವಿಕೆಟ್ ನ್ನು ಮೊಹಮ್ಮದ್ ಸಿರಾಜ್ ಉಡಾಯಿಸಿದರು. ಇದಾದ ಬಳಿಕ ಸಿರಾಜ್ ಒಂದಾದ ಮೇಲೊಂದರಂತೆ ವಿಕೆಟ್ ಕೀಳುತ್ತಲೇ ಒಟ್ಟು 6 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಆಫ್ರಿಕಾ ಪರ ಕೈಲ್ ವೆರೆನ್ನೆ 15 ರನ್ ಗಳಿಸಿದ್ದೇ ಗರಿಷ್ಠ ಸಾಧನೆ. ಬಳಿಕ ಡೇವಿಡ್ ಬೆಡಿಂಗ್ಹಾಮ್ 12 ರನ್ ಗಳಿಸಿದರು. ಉಳಿದಂತೆ ಎಲ್ಲಾ ಆಫ್ರಿಕಾ ಬ್ಯಾಟಿಗರದ್ದು ಸಿಂಗಲ್ ಡಿಜಿಟ್ ಸಾಧನೆ. ಸಿರಾಜ್ ಗೆ ಉತ್ತಮ ಸಾಥ್ ನೀಡಿದ ಬುಮ್ರಾ, ಮುಕೇಶ್ ಕುಮಾರ್ ತಲಾ 2 ವಿಕೆಟ್ ಕಬಳಿಸಿದರು. ವಿಶೇಷವೆಂದರೆ ಇಂದಿನ ಪಂದ್ಯಕ್ಕೆ ಕಮ್ ಬ್ಯಾಕ್ ಮಾಡಿದ್ದ ರವೀಂದ್ರ ಜಡೇಜಾಗೆ ಬೌಲಿಂಗ್ ಮಾಡುವ ಅವಕಾಶವೇ ಸಿಗಲಿಲ್ಲ! ಪ್ರಸಿದ್ಧ ಕೃಷ್ಣ 4 ಓವರ್ ಎಸೆದೂ ವಿಕೆಟ್ ಪಡೆಯುವಲ್ಲಿ ವಿಫಲರಾದರು.

Share this Story:

Follow Webdunia kannada

ಮುಂದಿನ ಸುದ್ದಿ

INDvsSA test: ಸೌತ್ ಆಫ್ರಿಕಾ ಬ್ಯಾಟಿಂಗ್: ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ