Publish Date: Wed, 01 Feb 2023 (08:30 IST)
Updated Date: Wed, 01 Feb 2023 (08:52 IST)
ಅಹಮ್ಮದಾಬಾದ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ಅಂತಿಮ ಟಿ20 ಪಂದ್ಯ ಗುಜರಾತ್ ನ ಅಹಮ್ಮದಾಬಾದ್ ಮೈದಾನದಲ್ಲಿ ನಡೆಯಲಿದೆ.
ಈಗಾಗಲೇ ಸರಣಿ 1-1 ರಿಂದ ಸಮಬಲಗೊಂಡಿರುವುದರಿಂದ ಇಂದು ಗೆದ್ದವರು ಸರಣಿ ಕೈ ವಶವಾಗಲಿದೆ. ಈ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಎರಡೂ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಬ್ಯಾಟಿಂಗ್ ಕೈ ಕೊಟ್ಟಿದ್ದು, ಬೌಲಿಂಗ್ ಕೂಡಾ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.
ಹೀಗಾಗಿ ಇಂದಿನ ಪಂದ್ಯದಲ್ಲಿ ಭಾರತ ಯುವ ಪಡೆ ಮತ್ತೆ ಫಾರ್ಮ್ ಗೆ ಬರಬೇಕಿದೆ. ಅತ್ತ ಏಕದಿನ ಸರಣಿ ಕಳೆದುಕೊಂಡಿರುವ ನ್ಯೂಜಿಲೆಂಡ್ ಟಿ20 ಸರಣಿಯನ್ನಾದರೂ ಗೆಲ್ಲುವ ತವಕದಲ್ಲಿರುವುದರಿಂದ ಈ ಪಂದ್ಯದಲ್ಲಿ ಪೈಪೋಟಿ ನಿರೀಕ್ಷಿಸಬಹುದು. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.