ಮುಂಬೈ: ಅಂಡರ್ 19 ವಿಶ್ವಕಪ್ ಗೆದ್ದ ಭಾರತ ವನಿತಾ ತಂಡಕ್ಕೆ ಬಿಸಿಸಿಐ 5 ಕೋಟಿ ರೂ. ಬಹುಮಾನ ಘೋಷಿಸಿದೆ.
ಶಫಾಲಿ ವರ್ಮ ನೇತೃತ್ವದ ಭಾರತ ತಂಡ ಇದೇ ಮೊದಲ ಬಾರಿಗೆ ಅಂಡರ್ 19 ವಿಶ್ವಕಪ್ ಗೆದ್ದುಕೊಂಡಿದೆ. ಫೈನಲ್ ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಗಳ ಗೆಲುವು ಸಾಧಿಸಿದೆ. ಭಾರತದ ಗೆಲುವಿಗೆ ಕ್ರಿಕೆಟ್ ಲೋಕ ಅಭಿನಂದನೆ ಸಲ್ಲಿಸಿದೆ.
ಈ ನಡುವೆ ಚೊಚ್ಚಲ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 5 ಕೋಟಿ ರೂ.ಗಳ ಬಹುಮಾನ ಘೋಷಿಸಿದೆ. ಬುಧವಾರ ಅಹಮ್ಮದಾಬಾದ್ ನಲ್ಲಿ ಭಾರತ-ನ್ಯೂಜಿಲೆಂಡ್ ಪುರುಷರ ತಂಡದ ಮೂರನೇ ಟಿ20 ಪಂದ್ಯವನ್ನು ಆಡಲಿದ್ದು, ಇದೇ ವೇಳೆ ಶಫಾಲಿ ವರ್ಮ ನೇತೃತ್ವದ ತಂಡವನ್ನು ಸನ್ಮಾನಿಸಿ ಬಹುಮಾನ ವಿತರಿಸಲಾಗುತ್ತದೆ.