ಲಕ್ನೋ: ಇಲ್ಲಿ ಏಕನಾ ಮೈದಾನದಲ್ಲಿ ನಡೆದಿದ್ದ ಭಾರತ ಮತ್ತು ನ್ಯೂಜಿಲೆಂಡ್ ದ್ವಿತೀಯ ಟಿ20 ಪಂದ್ಯಕ್ಕೆ ನಿರ್ಮಿಸಲಾಗಿದ್ದ ಪಿಚ್ ಭಾರೀ ಟೀಕೆಗೊಳಗಾಗಿತ್ತು. ಇದೀಗ ಆ ಪಿಚ್ ನಿರ್ಮಿಸಿದ್ದ ಕ್ಯುರೇಟರ್ ನ್ನು ಅಮಾನತು ಮಾಡಲಾಗಿದೆ ಎಂಬ ಸುದ್ದಿಯಿದೆ.
ದ್ವಿತೀಯ ಟಿ20 ಪಂದ್ಯದಲ್ಲಿ ಎರಡೂ ತಂಡಗಳೂ ಒಟ್ಟು ಸೇರಿ 200 ರನ್ ಹರಿದುಬಂದಿತ್ತಷ್ಟೇ. ಅಲ್ಲದೆ, ಒಟ್ಟಾರೆ 39.5 ಓವರ್ ಬೌಲಿಂಗ್ ಮಾಡಲಾಗಿತ್ತು. ಈ ಪೈಕಿ 30 ಓವರ್ ನ್ನೂ ಸ್ಪಿನ್ನರ್ ಗಳೇ ಮಾಡಬೇಕಾಗಿ ಬಂದಿತ್ತು. ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಈಗ ಪಿಚ್ ಕ್ಯುರೇಟರ್ ನ್ನು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಮಾನತು ಮಾಡಿದೆ ಎಂಬ ಸುದ್ದಿ ಕೇಳಿಬಂದಿದೆ.