Select Your Language

Notifications

webdunia
webdunia
webdunia
webdunia

IND vs SL ODI: ವಣೀಂದು ಹಸರಂಗ ಸ್ಥಾನಕ್ಕೆ ಬಂದು ಟೀಂ ಇಂಡಿಯಾವನ್ನು ಹಳಿ ತಪ್ಪಿಸಿದ ಜೆಫ್ರಿ ವಾಂಡರ್ಸೆಗಿದೆ ರೋಚಕ ಹಿನ್ನಲೆ

Jeffrey Vandersay

Krishnaveni K

ಕೊಲಂಬೊ , ಸೋಮವಾರ, 5 ಆಗಸ್ಟ್ 2024 (10:06 IST)
Photo Credit: Facebook
ಕೊಲಂಬೊ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತದ ಟಾಪ್ ಆರ್ಡರ್ ಬ್ಯಾಟಿಗರನ್ನು ಕಟ್ಟಿಹಾಕಿದ್ದ ಜೆಫ್ರಿ ವಾಂಡರ್ಸೆ ಬಗ್ಗೆ ರೋಚಕ ಕಹಾನಿ ನೀವು ತಿಳಿದುಕೊಳ್ಳಲೇಬೇಕು.

ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 32 ರನ್ ಗಳಿಂದ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಲಂಕಾ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಈ ಸಣ್ಣ ಮೊತ್ತ ಬೆನ್ನತ್ತಿದ ಭಾರತ ಜೆಫ್ರಿ ವಾಂಡರ್ಸೆ ದಾಳಿಗೆ ಸಿಲುಕಿ ಕೇವಲ 208 ರನ್ ಗಳಿಗೆ ಆಲೌಟ್ ಆಯಿತು.

ಈ ಪಂದ್ಯದಲ್ಲಿ ಜೆಫ್ರಿ ವಾಂಡರ್ಸೆ 6 ವಿಕೆಟ್ ಕಬಳಿಸಿದರು. ಅದರಲ್ಲೂ ಮೊದಲ ಆರೂ ವಿಕೆಟ್ ಗಳನ್ನೂ ಅವರೇ ಕಬಳಿಸಿದರು. ರೋಹಿತ್, ಕೊಹ್ಲಿ, ಗಿಲ್, ರಾಹುಲ್, ಶ್ರೇಯಸ್ ರಂತಹ ಟಾಪ್ ಬ್ಯಾಟಿಗರ ವಿಕೆಟ್ ಕಬಳಿಸಿ ಮಿಂಚಿದರು. ಒಂದು ಹಂತದಲ್ಲಿ ಇವರೇ ಎಲ್ಲಾ 10 ವಿಕೆಟ್ ಗಳನ್ನೂ ತಮ್ಮದಾಗಿಸುತ್ತಾರೇನೋ ಎನ್ನುವ ಪರಿಸ್ಥಿತಿಯಿತ್ತು.

ವಿಶೇಷವೆಂದರೆ ವಾಂಡರ್ಸೆ ಈ ಪಂದ್ಯದಲ್ಲಿ ತಂಡಕ್ಕೆ ಬಂದಿದ್ದೇ ಅಕಸ್ಮಾತ್ತಾಗಿ. ವಣೀಂದು ಹಸರಂಗ ಗಾಯಗೊಂಡು ಹೊರಗುಳಿದಿದ್ದರಿಂದ ಅವರ ಸ್ಥಾನಕ್ಕೆ ಸ್ಪಿನ್ನರ್ ವಾಂಡರ್ಸೆ ಬಂದರು. ವಾಂಡರ್ಸೆಗೆ ಈಗ 34 ವರ್ಷ. ಏಕದಿನ ಪಂದ್ಯಗಳಿಗೆ 2015 ರಲ್ಲೇ ಪದಾರ್ಪಣೆ ಮಾಡಿದ್ದರು. ಆದರೆ ಇಷ್ಟು ವರ್ಷಗಳಲ್ಲಿ ಅವರಿಗೆ ಆಡಲು ಅವಕಾಶ ಸಿಕ್ಕಿದ್ದು ಕೇವಲ 22 ಪಂದ್ಯಗಳಲ್ಲಿ ಮಾತ್ರ. ಇದುವರೆಗೆ 33 ವಿಕೆಟ್ ಪಡೆದಿದ್ದಾರೆ.

ಇಷ್ಟು ಸುದೀರ್ಘ ಕಾಲದಿಂದ ಅವರಿಗೆ ನಿನ್ನೆಯ ಪಂದ್ಯದಂತೆ ಅದ್ಭುತ ಪಂದ್ಯವೊಂದು ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ 5 ವಿಕೆಟ್ ಕಬಳಿಸಿದ್ದಾರೆ. ತಂಡಕ್ಕೆ ಪದಾರ್ಪಣೆ ಮಾಡಿ ಸಾಕಷ್ಟು ಸಮಯವಾಗಿದ್ದರೂ ಆಡಲು ಅವಕಾಶ ಸಿಗದೇ ಕಾಯುತ್ತಿದ್ದ ವಾಂಡರ್ಸೆಗೆ ನಿನ್ನೆ ಪರ್ಫೆಕ್ಟ್ ಮ್ಯಾಚ್ ಸಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ಪದಕದ ನಿರೀಕ್ಷೆಯಲ್ಲಿ ಭಾರತ: ಬ್ರಿಟನ್ ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ