Select Your Language

Notifications

webdunia
webdunia
webdunia
webdunia

IND vs NZ: ವಿರಾಟ್ ಕೊಹ್ಲಿ ಈಗ ಗರಿಷ್ಠ ರನ್ ಗಳಿಕೆಯಲ್ಲಿ ವಿಶ್ವ ನಂ2

Kohli
Photo Credit: X
ವಡೋದರಾ: ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಇಂದು ಹೊಸ ವಿಶ್ವ ದಾಖಲೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ವಡೋದರಾದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಈ ದಾಖಲೆ ಮಾಡಿದ್ದಾರೆ. ಇಂದು ಅರ್ಧಶತಕ ಗಳಿಸಿ ಆಡುತ್ತಿರುವ ಕೊಹ್ಲಿ 28,017 ರನ್ ಗಳಿಸುವ ಮೂಲಕ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಅವರನ್ನು ಹಿಂದಿಕ್ಕಿ ವಿಶ್ವ ನಂ.2 ಆಟಗಾರೆನಿಸಿದರು.

ವಿಶೇಷವೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಭಾರತೀಯರೇ ಆದ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಅವರು ಒಟ್ಟು 34, 357 ರನ್ ಗಳಿಸಿದ್ದಾರೆ.

ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 301 ರನ್ ಗಳ ಗುರಿ ಬೆನ್ನತ್ತಿರುವ ಭಾರತ ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿದೆ. ಗೆಲುವಿಗೆ ಇನ್ನೂ 19 ಓವರ್ ಗಳಲ್ಲಿ 113 ರನ್ ಗಳಿಸಬೇಕಿದೆ. ವಿರಾಟ್ ಕೊಹ್ಲಿ 71, ಶ್ರೇಯಸ್ ಅಯ್ಯರ್ 21 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇದಕ್ಕೆ ಮೊದಲು ರೋಹಿತ್ ಶರ್ಮಾ 26, ನಾಯಕ ಶುಭಮನ್ ಗಿಲ್ 56 ರನ್ ಗಳಿಸಿ ಔಟಾದರು.

Share this Story:

Follow Webdunia kannada

ಮುಂದಿನ ಸುದ್ದಿ

IND vs NZ: ಹೊಟ್ಟೆಗೆ ಗಾಯ ಮಾಡಿಕೊಂಡು ಜಸ್ಟ್ ಬಂದಿದ್ದಷ್ಟೇ, ಶ್ರೇಯಸ್ ಅಯ್ಯರ್ ಅದ್ಭುತ ರನೌಟ್ ನೋಡಿ Video