Publish Date: Sun, 11 Jan 2026 (17:25 IST)
Updated Date: Sun, 11 Jan 2026 (17:28 IST)
ವಡೋದರಾ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಹೊಟ್ಟೆಗೆ ಮಾಡಿಕೊಂಡಿದ್ದ ಗಾಯದಿಂದ ಚೇತರಿಸಿಕೊಂಡು ಈಗಷ್ಟೇ ತಂಡಕ್ಕೆ ಬಂದಿರುವ ಶ್ರೇಯಸ್ ಅಯ್ಯರ್ ಮತ್ತೆ ಅದ್ಭುತ ರನೌಟ್ ಮೂಲಕ ಗಮನ ಸೆಳೆದಿದ್ದಾರೆ.
ಆಸ್ಟ್ರೇಲಿಯಾ ಸರಣಿ ವೇಳೆ ಶ್ರೇಯಸ್ ಅಯ್ಯರ್ ಕ್ಯಾಚ್ ಹಿಡಿಯುವ ಯತ್ನದಲ್ಲಿ ನೆಲಕ್ಕೆ ಬಿದ್ದು ಹೊಟ್ಟೆಗೆ ಗಾಯ ಮಾಡಿಕೊಂಡಿದ್ದರು. ಅವರ ಗಾಯ ಎಷ್ಟು ಗಂಭೀರವಾಗಿತ್ತೆಂದರೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಇದರಿಂದ ಚೇತರಿಸಿಕೊಂಡು ಎರಡೇ ತಿಂಗಳಲ್ಲಿ ಅವರು ಮತ್ತೆ ಕಣಕ್ಕಿಳಿದಿದ್ದಾರೆ.
ಇಂದು ನ್ಯೂಜಿಲೆಂಡ್ ವಿರುದ್ಧ ವಡೋದರಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಮತ್ತೊಂದು ಅದ್ಭುತ ರನೌಟ್ ಮೂಲಕ ಗಮನ ಸೆಳೆದಿದ್ದು ತಾವೊಬ್ಬ ಅದ್ಭುತ ಫೀಲ್ಡರ್ ಎನ್ನುವುದನ್ನು ಮತ್ತೆ ನಿರೂಪಿಸಿದ್ದಾರೆ. ಮಿಚೆಲ್ ಬ್ರೇಸ್ ವೆಲ್ ರನ್ನು ಡೈರೆಕ್ಟ್ ಹಿಟ್ ಮೂಲಕ ಶ್ರೇಯಸ್ ರನೌಟ್ ಮಾಡಿದ್ದಾರೆ. ಅವರ ರನೌಟ್ ವಿಡಿಯೋ ಇಲ್ಲಿದೆ.
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ನ್ಯೂಜಿಲೆಂಡ್ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 300 ರನ್ ಕಲೆ ಹಾಕಿದೆ. ಇದೀಗ ಭಾರತ ಗೆಲ್ಲಲು ರನ್ ಗಳಿಸಬೇಕಿದೆ. ನ್ಯೂಜಿಲೆಂಡ್ ಪರ ಡೆರಿಲ್ ಮಿಚೆಲ್ 84, ಡೆವನ್ ಕಾನ್ವೆ 56, ಹೆನ್ರಿ ನಿಕಲಸ್ 62 ರನ್ ಗಳಿಸಿದರು. ಭಾರತದ ಪರ ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣ, ಪ್ರಸಿದ್ಧ ಕೃಷ್ಣ ತಲಾ 2, ಕುಲದೀಪ್ ಯಾದವ್ 1 ವಿಕೆಟ್ ಕಬಳಿಸಿದರು.