IND vs NZ Test: ನನ್ನ ಜಾಗ ಕಿತ್ಕೊಂಡ್ಯಲ್ಲೋ… ವಾಷಿಂಗ್ಟನ್ ಸುಂದರ್ ಗೆ ಅಕ್ಸರ್ ಪಟೇಲ್ ಲುಕ್ ನೋಡಿ

Krishnaveni K
ಗುರುವಾರ, 24 ಅಕ್ಟೋಬರ್ 2024 (15:58 IST)
Photo Credit: X
ಪುಣೆ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಎರಡನೇ ಟೆಸ್ಟ್ ಪಂದ್ಯದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಬೌಲಿಂಗ್ ನಲ್ಲಿ ಎದುರಾಳಿಗಳ ಮೇಲೆ ಸವಾರಿ ಮಾಡಿಬಿಟ್ಟರು. ಅವರ ಪ್ರದರ್ಶನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಕಾಮೆಂಟ್ ವ್ಯಕ್ತವಾಗುತ್ತಿದೆ.

ವಾಷಿಂಗ್ಟನ್ ಸುಂದರ್ ರನ್ನು ಇದ್ದಕ್ಕಿದ್ದಂತೆ ತಂಡಕ್ಕೆ ಕರೆಸಿಕೊಂಡಿದ್ದು ಕೋಚ್ ಗೌತಮ್ ಗಂಭೀರ್ ಎನ್ನಲಾಗಿದೆ. ಕಳೆದ ಪಂದ್ಯದಲ್ಲಿ ಕೆಎಲ್ ರಾಹುಲ್ ವೈಫಲ್ಯ, ಬ್ಯಾಟಿಂಗ್ ವೈಫಲ್ಯ ನೋಡಿದ ಮೇಲೆ ಗಂಭೀರ್ ತಂಡದಲ್ಲಿ ಆಲ್ ರೌಂಡರ್ ಒಬ್ಬರ ಅಗತ್ಯವಿದೆ  ಎನಿಸಿತ್ತು.

ಈ ಕಾರಣಕ್ಕೆ ವಾಷಿಂಗ್ಟನ್ ಸುಂದರ್ ಗೆ ಬುಲಾವ್ ನೀಡಲಾಯಿತು. ಆದರೆ ಅಕ್ಸರ್ ಪಟೇಲ್ ಇರುವಾಗ ವಾಷಿಂಗ್ಟನ್ ಗೆ ಯಾಕೆ ಜಾಗ ನೀಡಿದಿರಿ ಎಂದು ಕೆಲವು ಅಭಿಮಾನಿಗಳು ಟೀಕೆ ಮಾಡಿದ್ದು ಇದೆ. ಆದರೆ ವಾಷಿಂಗ್ಟನ್ ಸುಂದರ್ ಇಂದು ಎದುರಾಳಿಗಳ 7 ವಿಕೆಟ್ ಕಬಳಿಸುವ ಮೂಲಕ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡರು.

ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ 259 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರಮುಖ ಕಾರಣ ವಾಷಿಂಗ್ಟನ್ ಸುಂದರ್ ಬೌಲಿಂಗ್ ಕರಾಮತ್ತು. ಅವರು ಒಟ್ಟು 7 ವಿಕೆಟ್ ಕಬಳಿಸಿದರು. ಇದಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಕ್ಸರ್ ಪಟೇಲ್ ಡ್ರಿಂಕ್ಸ್ ಬ್ರೇಕ್ ವೇಳೆ ವಾಷಿಂಗ್ಟನ್ ಸುಂದರ್ ಅವರತ್ತ ದಿಟ್ಟಿಸಿ ನೋಡುವ ಫೋಟೋ ಹಾಕಿ ‘ಅಂತೂ ನನ್ನ ಜಾಗ ಕಿತ್ಕೊಂಡ್ಯಲ್ಲಾ’ ಎಂದು ಹೇಳುತ್ತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಳೇ ವಿಚಾರ ಹೇಳಿ ಹರ್ಲಿನ್ ಡಿಯೋಲ್ ಗೇ ಅಚ್ಚರಿ ನೀಡಿದ ಪ್ರಧಾನಿ ಮೋದಿ

ವಿಶ್ವಕಪ್ ಟ್ರೋಫಿ ಮುಟ್ಟದೇ ಪೋಸ್ ಕೊಟ್ಟ ಮೋದಿ: ಪ್ರಧಾನಿಗೆ ಕ್ರಿಕೆಟಿಗರು ಕೊಟ್ಟ ಗಿಫ್ಟ್ ಏನು

ವಿಶ್ವ ಚಾಂಪಿಯನ್ ಆದ ಮಹಿಳಾ ಕ್ರಿಕೆಟಿಗರನ್ನು ಭೇಟಿಯಾದ ಮೋದಿ: ಟ್ರೋಫಿ ಜೊತೆಗೆ ಪೋಸ್

Virat Kohli birthday: ಎಂಜಿ ರೋಡ್ ನಲ್ಲಿ ಮೊದಲು ಟ್ಯಾಟೂ ಹಾಕಿಸಿದ್ದ ಕೊಹ್ಲಿ ಆಮೇಲೆ ಮುಚ್ಚಿಟ್ಟಿದ್ದು ಯಾಕೆ

ತಿಲಕ ಬೇಡ ಎಂದ ಸ್ಮೃತಿ ಮಂಧಾನ: ಯಾಕೆ ಹೀಗೆ ನೆಟ್ಟಿಗರ ಪ್ರಶ್ನೆ: video

ಮುಂದಿನ ಸುದ್ದಿ
Show comments