Select Your Language

Notifications

webdunia
webdunia
webdunia
webdunia

IND vs ENG: ಇಂಗ್ಲೆಂಡ್ ಬ್ಯಾಟಿಗರಿಗೆ ಔಟ್ ಆಫ್ ಸಿಲಬಸ್ ಆಗಿ ಬಂದ ನಿತೀಶ್ ಕುಮಾರ್ ರೆಡ್ಡಿ

Nitish Kumar Reddy

Krishnaveni K

ಲಾರ್ಡ್ಸ್ , ಗುರುವಾರ, 10 ಜುಲೈ 2025 (17:58 IST)
Photo Credit: X
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟಿಗರಿಗೆ ಟೀಂ ಇಂಡಿಯಾ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಔಟ್ ಆಫ್ ಸಿಲಬಸ್ ಆಗಿ ಬಂದರು.

ಕಳೆದ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಬ್ಯಾಟಿಗರಿಗೆ ಕಾಡಿದ್ದು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್. ಹೀಗಾಗಿ ಮೂರನೇ ಪಂದ್ಯಕ್ಕೆ ಇಂಗ್ಲೆಂಡ್ ಬ್ಯಾಟಿಗರು ಈ ಮೂವರು ಬ್ಯಾಟಿಗರನ್ನು ಎದುರಿಸಲು ಸರ್ವ ಸಿದ್ಧತೆ ನಡೆಸಿದ್ದರು.

ಹೀಗಾಗಿ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಈ ಮೂರು ವೇಗಿಗಳನ್ನು ಸಮರ್ಥವಾಗಿ ನಿಭಾಯಿಸಿತು. ಆದರೆ ಇಂಗ್ಲೆಂಡಿಗರಿಗೆ ಔಟ್ ಆಫ್ ಸಿಲಬಸ್ ಆಗಿ ಬಂದಿದ್ದು ನಿತೀಶ್ ಕುಮಾರ್ ರೆಡ್ಡಿ.

ಮಧ್ಯಮ ವೇಗದ ಬೌಲಿಂಗ್ ಮಾಡಬಲ್ಲ ಆಲ್ ರೌಂಡರ್ ನಿತೀಶ್ ಕುಮಾರ್ ಕಳೆದ ಪಂದ್ಯದಲ್ಲಿ ಎಸೆದಿದ್ದು ಕೇವಲ 6 ಓವರ್. ಹೆಚ್ಚು ಪರಿಣಾಮಕಾರಿಯಾಗೂ ಇರಲಿಲ್ಲ. ಹೀಗಾಗಿ ಇಂಗ್ಲೆಂಡ್ ಅವರನ್ನು ಕಡೆಗಣಿಸಿತ್ತು. ಆದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ನ ಎರಡೂ ವಿಕೆಟ್ ಕಿತ್ತು ಆರಂಭಿಕ ಆಘಾತ ನೀಡಿದ್ದಾರೆ.

ಇತ್ತೀಚೆಗಿನ ವರದಿ ಬಂದಾಗ ಇಂಗ್ಲೆಂಡ್ 2 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ. ಬೆನ್ ಡಕೆಟ್ 23, ಜಾಕ್ ಕ್ರಾಲೇ 18 ರನ್ ಗಳಿಸಿ ಔಟಾದರು. ಇದೀಗ 24 ರನ್ ಗಳಿಸಿರುವ ಜೋ ರೂಟ್ ಮತ್ತು 12 ರನ್ ಗಳಿಸಿರುವ ಒಲಿ ಪಾಪ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿನ್ನರ್ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಶುಭ್ಮನ್– ಸಾರಾ, ಫೋಟೋ, ವಿಡಿಯೋ ವೈರಲ್