ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ನಾಲ್ಕನೇ ದಿನದಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದ್ದು ಇಂದು ಗೆದ್ದರೆ ಟೀಂ ಇಂಡಿಯಾ ದಾಖಲೆ ಮಾಡಲಿದೆ.
ಭಾರತ ಇದೀಗ 135 ರನ್ ಗಳ ಹಿನ್ನಡೆಯಲ್ಲಿದೆ. 192 ರನ್ ಗಳ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ನಿನ್ನೆ ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ಶುಭಮನ್ ಗಿಲ್ ಮತ್ತು ಆಕಾಶ್ ದೀಪ್ ವಿಕೆಟ್ ಕಳೆದುಕೊಂಡಿದೆ. ಇದೀಗ ಕೆಎಲ್ ರಾಹುಲ್ 33 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಜೈಸ್ವಾಲ್ ಖಾತೆ ತೆರೆಯದೇ ನಿರ್ಗಮಿಸಿದರೆ, ಕರುಣ್ ನಾಯರ್ 14, ಶುಭಮನ್ ಗಿಲ್ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಗಿಲ್ ಮತ್ತು ಜೈಸ್ವಾಲ್ ಈ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ವಿಫಲರಾಗಿದ್ದಾರೆ. ನೈಟ್ ವಾಚ್ ಮನ್ ಆಗಿ ಬಂದ ಆಕಾಶ್ ದೀಪ್ ಕೂಡಾ ಕೇವಲ 1 ರನ್ ಗಳಿಸಿ ಔಟಾಗಿದ್ದಾರೆ.
ಒಂದು ವೇಳೆ ಇಂದು ಭಾರತ ಗೆದ್ದರೆ ದಾಖಲೆಯಾಗಲಿದೆ. ಲಾರ್ಡ್ಸ್ ನಲ್ಲಿ ಭಾರತ ಕೇವಲ ಎರಡೇ ಬಾರಿ ಗೆಲುವು ಕಂಡಿದೆ. ಈ ಪೈಕಿ ಒಮ್ಮೆ ಮಾತ್ರ ಚೇಸ್ ಮಾಡಿ ಗೆದ್ದಿದೆ. ಇಂದು ಭಾರತ ಗೆದ್ದರೆ ಇದು ಕೇವಲ ಎರಡನೇ ಬಾರಿ ಚೇಸ್ ಮಾಡಿ ಗೆದ್ದಂತಾಗಲಿದೆ. ಆದರೆ ಇದಕ್ಕೆ ಭಾರತಕ್ಕೆ ಕೆಎಲ್ ರಾಹುಲ್, ರಿಷಭ್ ಪಂತ್, ರವೀಂದ್ರ ಜಡೇಜಾ ನಿಂತು ಆಡುವುದು ಮುಖ್ಯವಾಗಿದೆ. ಹೀಗಾಗಿ ಇಂದಿನ ಪಂದ್ಯ ರೋಚಕ ಘಟ್ಟಕದಲ್ಲಿದೆ.