Select Your Language

Notifications

webdunia
webdunia
webdunia
webdunia

IND vs ENG: ಇಷ್ಟಕ್ಕಾದ್ರೂ ಕನ್ನಡಿಗ ಕರುಣ್ ನಾಯರ್ ತಂಡದಲ್ಲಿರಬೇಕು ಎಂದ ಫ್ಯಾನ್ಸ್

Karun Nair

Krishnaveni K

ಎಜ್ ಬಾಸ್ಟನ್ , ಶನಿವಾರ, 5 ಜುಲೈ 2025 (11:02 IST)
Photo Credit: X
ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಇಷ್ಟಕ್ಕಾದರೂ ತಂಡದಲ್ಲಿರಬೇಕು ಎಂದು ಫ್ಯಾನ್ಸ್ ಆಗ್ರಹಿಸಿದ್ದಾರೆ.

ಕರುಣ್ ನಾಯರ್ 8 ವರ್ಷಗಳ ಬಳಿಕ ಟೀಂ ಇಂಡಿಯಾಗೆ ವಾಪಸ್ ಆಗಿದ್ದರು. ಆದರೆ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ ಶೂನ್ಯ ಎರಡನೇ ಇನಿಂಗ್ಸ್ ನಲ್ಲಿ 30 ರನ್ ಗಳಿಸಲಷ್ಟೇ ಶಕ್ತವಾಗಿದ್ದರು. ಈ ಪಂದ್ಯದಲ್ಲೂ ಮೊದಲ ಇನಿಂಗ್ಸ್ ನಲ್ಲಿ ಅವರು 31 ರನ್ ಗಳಿಸಿದ್ದರು.

ಬ್ಯಾಟಿಂಗ್ ನಲ್ಲಿ ಕರುಣ್ ನಾಯರ್ ಇದುವರೆಗೆ ತಮ್ಮ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ. ಆದರೆ ಈ ಪಂದ್ಯದಲ್ಲಿ ಅವರು ಸ್ಲಿಪ್ ಫೀಲ್ಡರ್ ಆಗಿ ಅದ್ಭುತ ನಿರ್ವಹಣೆ ತೋರುತ್ತಿದ್ದಾರೆ. ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 2 ಪ್ರಯಾಸಕರ ಕ್ಯಾಚ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಸ್ಲಿಪ್ ಜಾಗ ಎನ್ನುವುದು ತುಂಬಾ ಸೂಕ್ಷ್ಮ ಸ್ಥಳ. ಇಲ್ಲಿ ಫೀಲ್ಡಿಂಗ್ ಮಾಡುವಾಗ ಮೈ ಎಲ್ಲಾ ಕಣ್ಣಾಗಿರಬೇಕಾಗುತ್ತದೆ. ಕೆಎಲ್ ರಾಹುಲ್ ಜೊತೆ ನಿಂತುಕೊಂಡು ಕರುಣ್ ನಾಯರ್ ಉತ್ತಮ ಫೀಲ್ಡಿಂಗ್ ಮಾಡುವುದು ನೋಡಿ ಇದಕ್ಕಾದರೂ ಅವರು ತಂಡದಲ್ಲಿರಬೇಕು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಂದ್ಯದ ನಡುವೆ ಕ್ರಿಕೆಟಿಗರು, ಪ್ರೇಕ್ಷಕರು ಕಿವಿಗೆ ಈ ಸಾಧನವನ್ನು ಏಕೆ ಹಾಕಿಕೊಳ್ಳುತ್ತಿದ್ದಾರೆ