IND vs ENG: ಟಾಸ್ ಗೆದ್ದಇಂಗ್ಲೆಂಡ್, ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆ

Krishnaveni K
ಬುಧವಾರ, 2 ಜುಲೈ 2025 (15:10 IST)
ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಎಜ್ ಬಾಸ್ಟನ್ ನಲ್ಲಿ ಇಂದಿನಿಂದ ಆರಂಭವಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆ ಮಾಡಲಾಗಿದೆ.

ಕಳೆದ ಪಂದ್ಯವನ್ನು ಗೆಲ್ಲುವ ಎಲ್ಲಾ ಅವಕಾಶಗಳಿದ್ದೂ ಟೀಂ ಇಂಡಿಯಾ ಕಳಪೆ ಫೀಲ್ಡಿಂಗ್ ನಿಂದಾಗಿ ಸೋತಿತ್ತು. ಜೊತೆಗೆ ಕೆಳ ಕ್ರಮಾಂಕದ ಬ್ಯಾಟಿಗರು ವಿಫಲರಾಗಿದ್ದರು. ಹೀಗಾಗಿ ಈ ಪಂದ್ಯಕ್ಕೆ ಭಾರೀ ಬದಲಾವಣೆಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿದಿದೆ.

ನಿರೀಕ್ಷೆಯಂತೇ ಜಸ್ಪ್ರೀತ್ ಬುಮ್ರಾ ಈ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದಾರೆ. ಅವರ ಸ್ಥಾನಕ್ಕೆ ಆಕಾಶ್ ದೀಪ್ ಗೆ ಸ್ಥಾನ ನೀಡಲಾಗಿದೆ. ಅರ್ಷ್ ದೀಪ್ ಸಿಂಗ್ ಮತ್ತೆ ಬೆಂಚ್ ಕಾಯಿಸಬೇಕಾಗಿದೆ. ಉಳಿದಂತೆ ಕಳೆದ ಪಂದ್ಯದಲ್ಲಿ ಆಡಿದ್ದ ಸಾಯಿ ಸುದರ್ಶನ್ ಸ್ಥಾನ ಕಳೆದುಕೊಂಡಿದ್ದಾರೆ. ಕರುಣ್ ನಾಯರ್ ಸ್ಥಾನ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ತಂಡ ಇಂತಿದೆ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಶುಬ್ಮನ್ ಗಿಲ್ (ನಾಯಕ) ರಿಷಭ್ ಪಂತ್ (ಉಪನಾಯಕ), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕೆಕೆಆರ್‌ನಿಂದ ಮುಸ್ತಾಫಿಜುರ್ ರೆಹಮಾನ್ ಔಟ್‌: ಬಾಂಗ್ಲಾದೇಶದಲ್ಲಿ ಐಪಿಎಲ್‌ ನಿಷೇಧ

ನಾಳೆಯಿಂದ ಮತ್ತೆ ವಿಜಯ್ ಹಜಾರೆ ಟ್ರೋಫಿ: ಕೊಹ್ಲಿ, ರೋಹಿತ್ ಆಡ್ತಾರಾ ಎನ್ನುವುದಕ್ಕೆ ಇಲ್ಲಿದೆ ಉತ್ತರ

ಮೊಹಮ್ಮದ್ ಶಮಿ ಒಂದೇ ಎಸೆತಕ್ಕೆ ತೊಡೆ ಊದಿಸಿಕೊಂಡಿದ್ದ ಸ್ಮೃತಿ ಮಂಧಾನ

ಬಾಂಗ್ಲಾದೇಶೀಯರೇ ನಿಮಗೆ ಸೇಡು ತೀರಿಸಬೇಕೆಂದಿದ್ದರೆ ಕ್ರಿಕೆಟ್ ಅಲ್ಲ ನಿಮ್ಮ ದೇಶದವರನ್ನು ಭಾರತದಿಂದ ವಾಪಸ್ ಕರೆಸಿ

ಮುಸ್ತಾಫಿಜುರ್‌ನನ್ನು ಐಪಿಎಲ್‌ನಿಂದ ಕೈಬಿಟ್ಟ ಬೆನ್ನಲ್ಲೇ ಹೊಸ ವರಸೆ ತೆಗೆದ ಬಾಂಗ್ಲಾದೇಶ

ಮುಂದಿನ ಸುದ್ದಿ
Show comments