IND vs BAN Test: ಬೆಳ್ಳಂ ಬೆಳಿಗ್ಗೆಯೇ ಧಾರಾಕಾರ ಮಳೆ, ಆಟ ನಡೆಯಲು ಮಳೆ ಕಾಟ

Krishnaveni K
ಶನಿವಾರ, 28 ಸೆಪ್ಟಂಬರ್ 2024 (10:06 IST)
Photo Credit: X
ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಸತತ ಎರಡನೇ ದಿನವೂ ಮಳೆಯ ಕಾಟವಾಗಿದೆ. ಇಂದೂ ಮಳೆಯಿಂದಾಗಿ ಇನ್ನೂ ಪಂದ್ಯ ಆರಂಭವಾಗಿಲ್ಲ.

ಮಳೆಯಿಂದಾಗಿ ನಿನ್ನೆ ಮೊದಲ ದಿನ ತಡವಾಗಿ ಪಂದ್ಯ ಆರಂಭವಾಯಿತು. ಇಂದೂ ಬೆಳಿಗ್ಗೆಯೇ ಕಾನ್ಪುರ ಮೈದಾನದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇದುವರೆಗೆ ಪಂದ್ಯ ಆರಂಭವಾಗಿಲ್ಲ. ಅಂಪಾಯರ್ ಗಳು ಈಗಷ್ಟೇ ಮೈದಾನಕ್ಕೆ ಬಂದು ಪರಿಸ್ಥಿತಿ ಅವಲೋಕಿಸಿದ್ದಾರೆ.  ಇನ್ನೂ ಪಂದ್ಯ ಎಷ್ಟೊತ್ತಿಗೆ ಆರಂಭವಾಗಲಿದೆ ಎನ್ನುವುದು ಖಚಿತವಾಗಿಲ್ಲ.

ನಿನ್ನೆ ಮೊದಲ ದಿನದಂತ್ಯಕ್ಕೂ ಮಂದ ಬೆಳಕಿನಿಂದಾಗಿ ನಿಗದಿತ ಸಮಯಕ್ಕಿಂತ ಮೊದಲೇ ದಿನದಾಟ ಮುಗಿಸಲಾಯಿತು. ನಿನ್ನೆಯ ಇಡೀ ದಿನ ಕೇವಲ 35 ಓವರ್ ಗಳಷ್ಟೇ ಪಂದ್ಯ ನಡೆದಿದೆ. ಮೊದಲ ದಿನ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಬಾಂಗ್ಲಾ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತ್ತು. ಆಕಾಶ್ ದೀಪ್ 2, ರವಿಚಂದ್ರನ್ ಅಶ್ವಿನ್ 1 ವಿಕೆಟ್ ಕಬಳಿಸಿದ್ದರು.

ಹವಾಮಾನ ವರದಿ ಪ್ರಕಾರ ಮೊದಲ ಎರಡು ದಿನಗಳು ಮಳೆಯಿಂದಾಗಿ ಅಡಚಣೆಯಾಗಬಹುದು ಎನ್ನಲಾಗಿತ್ತು. ಅದರಂತೆ ಎರಡೂ ದಿನದಾಟದಲ್ಲೂ ಮಳೆಯದ್ದೇ ಕಾರುಬಾರು ಎಂಬ ಪರಿಸ್ಥಿತಿಯಾಗಿದೆ. ಕೆಲ ಹೊತ್ತಿಲ್ಲೇ ಪಂದ್ಯ ಆರಂಭವಾಗುವ ಆಶಾಭಾವವಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐದು ವರ್ಷಗಳ ಬಳಿಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ವಿರಾಟ್‌ ಕೊಹ್ಲಿ: ರೋಹಿತ್‌ ಶರ್ಮಾಗೆ ಶಾಕ್‌

IND vs NZ: ನ್ಯೂಜಿಲೆಂಡ್ ವಿರುದ್ಧ ಸೋತ ಬಳಿಕ ಟೀಂ ಇಂಡಿಯಾಗೆ ಕಾಡುತ್ತಿದೆ ಈ ಬೌಲರ್ ನ ಕೊರತೆ

IND vs NZ: ಒತ್ತಡದಲ್ಲಿ ಆಡಿ ಶತಕ ಗಳಿಸಿದ ಕೆಎಲ್ ರಾಹುಲ್ ಗೆ ಬಹುಪರಾಕ್

ವಿರಾಟ್ ಕೊಹ್ಲಿ ಮತ್ತೆ ವಿಶ್ವ ನಂ 1 ಆಟಗಾರ

ವಿರಾಟ್ ಕೊಹ್ಲಿ ಚಿನ್ನದ ಮೊಬೈಲ್ ಕವರ್ ಗಿಫ್ಟ್ ಕೊಡಲು ಬಂದ ಫ್ಯಾನ್: ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ video

ಮುಂದಿನ ಸುದ್ದಿ
Show comments