Select Your Language

Notifications

webdunia
webdunia
webdunia
webdunia

ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡೋದು ಹೇಗೆ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ನಡುವೆ ಸ್ಪರ್ಧೆ (ವಿಡಿಯೋ)

Kohli-Bumrah-Jadeja

Krishnaveni K

ಕಾನ್ಪುರ , ಶುಕ್ರವಾರ, 27 ಸೆಪ್ಟಂಬರ್ 2024 (13:00 IST)
Photo Credit: X
ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ಭೋಜನ ವಿರಾಮದ ವೇಳೆಗೆ ಬಾಂಗ್ಲಾ 2 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿದೆ. ಮೈದಾನದಲ್ಲಿ ಕೊಹ್ಲಿ-ಜಡೇಜಾ ನಡುವೆ ಬುಮ್ರಾ ಬೌಲಿಂಗ್ ಆಕ್ಷನ್ ಬಗ್ಗೆ ನಡೆದ ಮಿಮಿಕ್ರಿ ಎಲ್ಲರ ಮುಖದಲ್ಲಿ ನಗು ಮೂಡಿಸಿದೆ.

ದಿನದಾಟದ ಆರಂಭಕ್ಕೆ ಮುನ್ನ ಎಲ್ಲಾ ಆಟಗಾರರೂ ಸಮವಸ್ತ್ರದಲ್ಲಿ ಮೈದಾನದಲ್ಲಿರುವಾಗ ವಿರಾಟ್ ಕೊಹ್ಲಿ ಮತ್ತು ಜಡೇಜಾ ಪ್ರೇಕ್ಷಕರಿಗೆ ಮನರಂಜನೆ ಒದಗಿಸಿದರು. ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ವಿಶಿಷ್ಟವಾಗಿದೆ. ಕೊಹ್ಲಿ ಆಗಾಗ ಬುಮ್ರಾ ಬೌಲಿಂಗ್ ಶೈಲಿಯನ್ನು ಮಿಮಿಕ್ ಮಾಡುತ್ತಾರೆ.

ಇಂದೂ ಕೊಹ್ಲಿ ಜೊತೆಗೆ ಜಡೇಜಾ ಕೂಡಾ ಸೇರಿಕೊಂಡು ಮೈದಾನದಲ್ಲಿ ಬುಮ್ರಾ ಬೌಲಿಂಗ್ ಆಕ್ಷನ್ ಮಿಮಿಕ್ರಿ ಮಾಡಿದರು. ಮೊದಲು ಕೊಹ್ಲಿ ನಂತರ ಜಡೇಜಾ ಹಾಗಲ್ಲ ಹೀಗೆ ಎನ್ನುತ್ತಾ ಬುಮ್ರಾ ಎದುರಿಗೇ ಬೌಲಿಂಗ್ ಶೈಲಿಯನ್ನು ಅನುಕರಿಸಿ ಕಾಲೆಳೆಯುತ್ತಿದ್ದರು. ಪಕ್ಕದಲ್ಲಿದ್ದ ಸಹಾಯ ಸಿಬ್ಬಂದಿಗಳಿಗೂ ನಗುವೋ ನಗು.

ಆದರೆ ಇಬ್ಬರೂ ತನ್ನ ಕಾಲೆಳೆಯುತ್ತಿರುವುದರಿಂದ ಬುಮ್ರಾ ಕೂಡಾ ಕೌಂಟರ್ ಕೊಟ್ಟರು. ಕೊಹ್ಲಿ ನಿಲ್ಲುವ ಭಂಗಿಯನ್ನು ಮಾಡಿ ತೋರಿಸಿದರು. ಈ ಫನ್ನಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

IND vs BAN test: ಬಾಂಗ್ಲಾದೇಶ ವಿರುದ್ಧ ಟಾಸ್ ಗೆದ್ದ ಟೀಂ ಇಂಡಿಯಾ, 9 ವರ್ಷಗಳಲ್ಲಿ ಮಾಡದ ಕೆಲಸ ಮಾಡಿದ ರೋಹಿತ್