Select Your Language

Notifications

webdunia
webdunia
webdunia
webdunia

ಮುಂಚಿನಂತಿಲ್ಲ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ: ಅದಕ್ಕೆ ಈ ವಿಡಿಯೋವೇ ಸಾಕ್ಷಿ

Virat Kohli-Gautam Gambhir

Krishnaveni K

ಕಾನ್ಪುರ , ಬುಧವಾರ, 25 ಸೆಪ್ಟಂಬರ್ 2024 (15:33 IST)
ಕಾನ್ಪುರ: ಐಪಿಎಲ್ ಪಂದ್ಯಾವಳಿಯಲ್ಲಿ ಈ ಹಿಂದೆ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ಈ ಮೊದಲು ನಡೆದಿದ್ದ ಮಾತಿನ ಚಕಮಕಿಗಳು ಯಾರಿಗೆ ಗೊತ್ತಿಲ್ಲ ಹೇಳಿ? ಆದರೆ ಈಗ ಈ ಇಬ್ಬರೂ ಮೊದಲಿನಂತಿಲ್ಲ. ಅದಕ್ಕೆ ಈ ವಿಡಿಯೋವೇ ಸಾಕ್ಷಿ.

ಗೌತಮ್ ಗಂಭೀರ್ ಈಗ ಟೀಂ ಇಂಡಿಯಾ ಕೋಚ್ ಆಗಿದ್ದಾರೆ. ಕೋಚ್ ಆಗಿ ಆಯ್ಕೆಯಾದ ಮೇಲೆ ಗಂಭೀರ್-ಕೊಹ್ಲಿ ಇಬ್ಬರೂ ಹಳೆಯ ಕಹಿ ಘಟನೆಗಳನ್ನು ಮರೆತು ಮುನ್ನಡೆಯುವ ನಿರ್ಧಾರ ಮಾಡಿದ್ದಾರೆ. ಇದು ಎಷ್ಟೆಂದರೆ ಗಂಭೀರ್ ಮತ್ತು ಕೊಹ್ಲಿ ಈಗ ಕುಚಿಕು ಗೆಳೆಯರಂತೆ ಎಲ್ಲೇ ಹೋದರೂ ಜೊತೆಯಾಗಿಯೇ ಇರ್ತಾರೆ.

ಪ್ರಯಾಣ ಮಾಡುವಾಗ ಇರಲಿ, ಪೆವಿಲಿಯನ್ ನಲ್ಲಿರಲಿ, ಮೈದಾನದಲ್ಲಿ ಅಭ್ಯಾಸದ ವೇಳೆಯಿರಲಿ ಎಲ್ಲಾ ಕಡೆ ಕೊಹ್ಲಿ-ಗಂಭೀರ್ ಜೊತೆಗೇ ಇರುತ್ತಾರೆ. ಸದಾ ಗಂಭೀರವಾಗಿರುವ ಗಂಭೀರ್ ರನ್ನು ಚೆನ್ನೈ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದ ಕ್ಷಣಗಳು ಎಲ್ಲರ ಕಣ್ಣಿಗೆ ಬಿದ್ದಿತ್ತು.

ಎಲ್ಲೇ ಹೋದರೂ ಅಕ್ಕ-ಪಕ್ಕವೇ ಕುಳಿತುಕೊಳ್ಳುವ ಇವರ ಹೊಸದೊಂದು ಗೆಳೆತನದ ವಿಡಿಯೋ ವೈರಲ್ ಆಗಿದೆ. ಬಾಂಗ್ಲಾದೇಶ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವಾಡಲು ಕಾನ್ಪುರಕ್ಕೆ ಬಂದಾಗ ವಿಮಾನ ನಿಲ್ದಾಣದಲ್ಲಿ ಇಲೆಕ್ಟ್ರಿಕ್ ವಾಹನದಲ್ಲಿ ಇಬ್ಬರೂ ಪರಸ್ಪರ ಅಂಟಿಕೊಂಡೇ ಕುಳಿತು ಹರಟೆ ಹೊಡೆಯುತ್ತಾ ಸಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಎರಡನೇ ಟೆಸ್ಟ್ ಮೊದಲ ಎರಡು ದಿನ ನಡೆಯೋದೇ ಡೌಟ್