Publish Date: Thu, 26 Sep 2024 (10:34 IST)
Updated Date: Thu, 26 Sep 2024 (10:39 IST)
ಕಾನ್ಪುರ: ಇತ್ತೀಚೆಗಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಬ್ಯಾಟಿನಿಂದ ಎಂದಿನ ಅದ್ಭುತ ಇನಿಂಗ್ಸ್ ಬಂದಿದ್ದೇ ಇಲ್ಲ. ಅವರ ಕಳಪೆ ಫಾರ್ಮ್ ಈಗ ನೆಟ್ಸ್ ನಲ್ಲೂ ಮುಂದುವರಿದಿದೆ.
ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ನಿನ್ನೆ ಕಾನ್ಪುರದಲ್ಲಿ ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸಿದರು. ಈ ವೇಳೆ ವಿರಾಟ್ ಕೊಹ್ಲಿ ಕೂಡಾ ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಆದರೆ ಈ ವೇಳೆ ಅವರು ನೆಟ್ ಬೌಲರ್ ಗೇ ಎರಡು ಬಾರಿ ಔಟ್ ಆಗಿದ್ದಾರೆ.
ಕೊಹ್ಲಿಇತ್ತೀಚೆಗಿನ ದಿನಗಳಲ್ಲಿ ಸ್ಪಿನ್ನರ್ ಗಳಿಗೂ ಹೆಚ್ಚು ತಡಕಾಡುತ್ತಿದ್ದಾರೆ ಎಂಬ ಅಪವಾದವಿದೆ. ನೆಟ್ಸ್ ಪ್ರಾಕ್ಟೀಸ್ ವೇಳೆಯೂ ಸ್ಪಿನ್ನರ್ ಅಕ್ಸರ್ ಪಟೇಲ್ ಎದುರು ಅವರನ್ನು ಎದುರಿಸಲು ಅವರು ಹೆಣಗಾಡಿದರು. ಮೊದಲ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಕಳಪೆ ಸಾಧನೆ ಮಾಡಿದ್ದರು.
ಇದೀಗ ಎರಡನೇ ಪಂದ್ಯದಲ್ಲಿ ಅವರು ಉತ್ತಮ ಪ್ರದರ್ಶನ ನೀಡುವ ಒತ್ತಡದಲ್ಲಿದ್ದಾರೆ. ಹೀಗಾಗಿ ಸತತವಾಗಿ ಅವರು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಲೇ ಇದ್ದಾರೆ. ಆದರೆ ನೆಟ್ ಪ್ರಾಕ್ಟೀಸ್ ವೇಳೆ ಕೊಹ್ಲಿ ತಡಬಡಾಯಿಸಿದ್ದು ನೋಡಿದರೆ ಅವರ ಫಾರ್ಮ್ ಬಗ್ಗೆ ಸಂಶಯಪಡುವಂತಾಗಿದೆ.