Webdunia - Bharat's app for daily news and videos

Install App

IND vs BAN Test: ಭಾರತಕ್ಕೆ ನಿಂದಿಸುತ್ತಿದ್ದ ಬಾಂಗ್ಲಾ ಅಭಿಮಾನಿಯನ್ನು ಥಳಿಸಿದ ಫ್ಯಾನ್ಸ್: ವಿಡಿಯೋ ನೋಡಿ

Sampriya
ಶುಕ್ರವಾರ, 27 ಸೆಪ್ಟಂಬರ್ 2024 (15:16 IST)
Photo Courtesy X
ಚೆನ್ನೈ: ಶುಕ್ರವಾರ ಕಾನ್ಪುರದ ಗ್ರೀನ್ ಪಾಕ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಎರಡನೇ ಟೆಸ್ಟ್ ಪಂದ್ಯಾಟದ ವೇಳೆ ಭಾರತ ಶತ್ರು ಎಂದು ಘೋಷಣೆ ಕೂಗುತ್ತಿದ್ದ ಬಾಂಗ್ಲಾ ಅಭಿಮಾನಿ ಮೇಲೆ ಹಲ್ಲೆ ನಡೆದ ಘಟನೆ ನಡೆದಿದೆ.

ಬಾಂಗ್ಲಾದೇಶ ತಂಡದ ಸೂಪರ್ ಫ್ಯಾನ್ ಟೈಗರ್ ರಾಬಿ ಅವರನ್ನು ಕೆಲವು ಟೀಂ ಇಂಡಿಯಾ ಅಭಿಮಾನಿಗಳು ಥಳಿಸಿದ್ದಾರೆ ಎನ್ನಲಾಗಿದೆ.  ಪಂದ್ಯಾಟದ ವೇಳೆ ಭಾರತ ಕ್ರಿಕೆಟರ್ ಮೊಹಮ್ಮದ್ ಸಿರಾಜ್‌ರನ್ನು ನಿಂದನೆ ಮಾಡುತ್ತಿದ್ದ. ಅದಲ್ಲದೆ ಭಾರತ ಶತ್ರು ಎಂದು ಕೂಗಾಡಿದ್ದಾನೆ. ಇದರಿಂದ ಕೋಪಗೊಂಡ ಟೀಂ ಇಂಡಿಯಾ ಫ್ಯಾನ್ಸ್‌ ಆತನ ಮೇಲೆ ಹಲ್ಲೆ ಮಾಡಿದ್ದಾರೆ.

ಪೊಲೀಸರು ಮಧ್ಯಪ್ರವೇಶಿಸಿ ರಾಬಿಯನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದ 1ನೇ ದಿನದಂದು ಈ ಘಟನೆ ನಡೆದಿದೆ. ಸ್ಥಳೀಯ ಅಭಿಮಾನಿಗಳು ಮತ್ತು ರಾಬಿ ನಡುವಿನ ಜಗಳಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡ ಸುದ್ದಿ ಸಂಸ್ಥೆ ಪಿಟಿಐ ಹೀಗೆ ಬರೆದಿದೆ.

"ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ಎರಡನೇ ಟೆಸ್ಟ್ ಪಂದ್ಯದ ವೇಳೆ ಬಾಂಗ್ಲಾದೇಶ ಕ್ರಿಕೆಟ್ ತಂಡದ 'ಸೂಪರ್ ಫ್ಯಾನ್' ಟೈಗರ್ ರಾಬಿ ಅವರನ್ನು ಕೆಲವರು ಥಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೊಲೀಸರಿಂದ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸೌರವ್ ಗಂಗೂಲಿ ಹೊಸ ಇನಿಂಗ್ಸ್‌ ಆರಂಭ: ದಾದಾ ಇನ್ನು ಕ್ರಿಕೆಟ್ ಲೀಗ್‌ನಲ್ಲಿ ಮುಖ್ಯ ಕೋಚ್

ಭಾರತದ ವಾಲ್ 2.0 ಖ್ಯಾತಿಯ ಚೇತೇಶ್ವರ ಪೂಜಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ

ನಿವೃತ್ತಿ ವದಂತಿಯ ಬೆನ್ನಲ್ಲೇ ಲಾರ್ಡ್ಸ್‌ನಲ್ಲಿ ಏಕದಿನ ಸರಣಿಗಾಗಿ ಬ್ಯಾಟ್‌ ಹಿಡಿದ ಕಿಂಗ್‌ ಕೊಹ್ಲಿ

ಶುಭಮನ್ ಗಿಲ್ ಗೆ ಅನಾರೋಗ್ಯ, ಬ್ಲಡ್ ರಿಪೋರ್ಟ್ ಬಿಸಿಸಿಐಗೆ ಸಲ್ಲಿಸಿದ ಗಿಲ್

ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಜೆರ್ಸಿಗೆ ಪ್ರಾಯೋಜಕರೇ ಇರಲ್ವಾ

ಮುಂದಿನ ಸುದ್ದಿ
Show comments