ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್: ಚೆನ್ನೈನಲ್ಲಿ ಜಡೇಜಾ ‘ಕಿಂಗ್’, ಸ್ಪಿನ್ ಗೆ ತತ್ತರಿಸಿ ಆಸೀಸ್

Webdunia
ಭಾನುವಾರ, 8 ಅಕ್ಟೋಬರ್ 2023 (17:15 IST)
Photo Courtesy: Twitter
ಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುತ್ತಿರುವ ಟೀಂ ಇಂಡಿಯಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದೆ.

ಇಂದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಎರಡನೇ ಓವರ್ ನಲ್ಲಿಯೇ ಮಿಚೆಲ್ ಮಾರ್ಷ್ (0) ವಿಕೆಟ್ ಕಳೆದುಕೊಂಡಿತು. ಆದರೆ ಬಳಿಕ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಜೋಡಿ ಎಚ್ಚರಿಕೆಯ ಆಟವಾಡಿ ಎರಡನೇ ವಿಕೆಟ್ ಗೆ 69 ರನ್ ಗಳ ಜೊತೆಯಾಟವಾಡಿತು.

ಈ ಇಬ್ಬರನ್ನು ಬೇರ್ಪಡಿಸಿದ್ದು ಕುಲದೀಪ್ ಯಾದವ್. ಇಲ್ಲಿಂದ ಭಾರತದ ಸ್ಪಿನ್ ಜಾದೂ ಶುರುವಾಯಿತು. ಇದಾದ ಬಳಿಕ ರವೀಂದ್ರ ಜಡೇಜಾ ಬೆನ್ನು  ಬೆನ್ನಿಗೆ ಸ್ಟೀವ್ ಸ್ಮಿತ್, ಲಬುಶೇನ್ ವಿಕೆಟ್ ಕಬಳಿಸಿದಾಗ ಆಸೀಸ್ ಸಂಕಷ್ಟಕ್ಕೀಡಾಯಿತು. ಸ್ಟೀವ್ 46 ರನ್ ಗಳಿಸಿ ಔಟಾದರೆ ಲಬುಶೇನ್ 27 ರನ್ ಗಳಿಸಿದರು. ಆಸ್ಟ್ರೇಲಿಯಾಗೆ ಎಂದಿನಂತೆ ಬಿರುಸಿನ ಆಟವಾಡಲು ಟೀಂ ಇಂಡಿಯಾ ಬೌಲರ್ ಗಳು ಅವಕಾಶ ಕೊಡಲೇ ಇಲ್ಲ. ಜಡೇಜಾ ಚೆನ್ನೈ ಮೈದಾನದಲ್ಲಿ ಸಾಕಷ್ಟು ಐಪಿಎಲ್ ಪಂದ್ಯಗಳನ್ನಾಡಿದ್ದರಿಂದ ಅವರ ಅನುಭವ ಇಲ್ಲಿ ಭಾರತಕ್ಕೆ ಪ್ಲಸ್ ಪಾಯಿಂಟ್ ಆಯಿತು. ಇದೀಗ 40 ಓವರ್ ಗಳ ಆಟದ ಮುಕ್ತಾಯಕ್ಕೆ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ. ಭಾರತದ ಪರ ಜಡೇಜಾ 3, ಕುಲದೀಪ್ ಯಾದವ್ 2, ಬುಮ್ರಾ, ಅಶ್ವಿನ್ ತಲಾ 1 ವಿಕೆಟ್ ಕಬಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕೊಹ್ಲಿಯಿಂದ ಬ್ಯಾಟಿಂಗ್ ಟಿಪ್ಸ್, ರೋಹಿತ್ ರಿಂದ ಕ್ಯಾಪ್ಟನ್ಸಿ ಟಿಪ್ಸ್: ಶುಭಮನ್ ಗಿಲ್ ಬಲು ಜಾಣ

ಫಿಟ್ ಇದ್ರೆ ನಂಗೆ ಹೇಳ್ಬೇಕಿತ್ತು, ಮೊಹಮ್ಮದ್ ಶಮಿಗೆ ಅಜಿತ್ ಅಗರ್ಕರ್ ತಿರುಗೇಟು

ಯಾವ ದಿನ ನಿವೃತ್ತಿಯಾಗುತ್ತೇನೆಂದು ಅಂದೇ ಹೇಳಿದ್ದರು ವಿರಾಟ್ ಕೊಹ್ಲಿ

Video: ವಿರಾಟ್ ಕೊಹ್ಲಿ ಅಟೋಗ್ರಾಫ್ ಕೊಟ್ಟಿದ್ದಕ್ಕೆ ಈ ಹುಡುಗ ಹಿಂಗೆಲ್ಲಾ ಮಾಡೋದಾ

ವಿರಾಟ್ ಕೊಹ್ಲಿ ಆರ್ ಸಿಬಿಗೆ ಗುಡ್ ಬೈ ಹೇಳಲ್ಲ: ಮೊಹಮ್ಮದ್ ಕೈಫ್ ನೀಡಿದ ಕಾರಣ ನೋಡಿ

ಮುಂದಿನ ಸುದ್ದಿ
Show comments