Publish Date: Mon, 20 Jul 2020 (09:36 IST)
Updated Date: Mon, 20 Jul 2020 (09:38 IST)
ದುಬೈ: ಐಸಿಸಿ ಇಂದು ಮಹತ್ವದ ಸಭೆ ನಡೆಸಲಿದ್ದು, ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ರದ್ದು ಮಾಡುವ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ‍್ಯತೆಯಿದೆ.
ಆಸ್ಟ್ರೇಲಿಯಾ ಈಗಾಗಲೇ ತನ್ನ ನೆಲದಲ್ಲಿ ಕೊರೋನಾ ಕಾರಣಕ್ಕೆ ಟಿ20 ವಿಶ್ವಕಪ್ ನಡೆಸುವುದು ಸುರಕ್ಷಿತವಲ್ಲ ಎಂದಿದೆ. ಹೀಗಾಗಿ ಕೂಟ ರದ್ದುಗೊಳ್ಳುವ ಸಾಧ‍್ಯತೆಯಿದೆ. ಆದರೆ ಈ ಬಗ್ಗೆ ಐಸಿಸಿ ಇದುವರೆಗೆ ಅಧಿಕೃತ ಘೋಷಣೆ ಮಾಡಿರಲಿಲ್ಲ.
ಅದು ಇಂದು ಹೊರಬೀಳುವ ಸಾಧ‍್ಯತೆಯಿದೆ. ಒಂದು ವೇಳೆ ಐಸಿಸಿ ಈ ಘೋಷಣೆ ಮಾಡಿದರೆ ಐಪಿಎಲ್ ಅಭಿಮಾನಿಗಳಿಗೆ ಖುಷಿಯಾಗಲಿದೆ. ಯಾಕೆಂದರೆ ಬಿಸಿಸಿಐ ಇದೇ ಸಮಯದಲ್ಲಿ ಯುಎಇನಲ್ಲಿ ಐಪಿಎಲ್ ನಡೆಸಲು ಸಕಲ ತಯಾರಿ ನಡೆಸುತ್ತಿದೆ. ಹೀಗಾಗಿ ಇಂದಿನ ಸಭೆಗೆ ಮಹತ್ವ ಬಂದಿದೆ.