Publish Date: Tue, 27 Mar 2018 (11:46 IST)
Updated Date: Tue, 27 Mar 2018 (11:49 IST)
ನವದೆಹಲಿ: ಪತಿ, ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಮೇಲೆ ಗೃಹ ಹಿಂಸೆ ಪ್ರಕರಣ ಜತೆಗೆ ಹಲವು ಗಂಭೀರ ಆರೋಪಗಳನ್ನು ಹೊರಿಸಿದ ಮೇಲೂ ಪತ್ನಿ ಹಸೀನ್ ಜಹಾನ್ ಇದೀಗ ಅಪಘಾತದಲ್ಲಿ ಗಾಯಗೊಂಡಿರುವ ಶಮಿ ಭೇಟಿಗೆ ಟಿಕೆಟ್ ಖರೀದಿಸಿದ್ದಾರಂತೆ!
ಮೊಹಮ್ಮದ್ ಶಮಿ ಮೊನ್ನೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಇದೀಗ ಪತಿ ಭೇಟಿಗಾಗಿ ಹಸೀನ್ ತಮಗೆ ಹಾಗೂ ತಮ್ಮ ಪುತ್ರಿಗೆ ಓಪನ್ ಟಿಕೆಟ್ ಖರೀದಿಸಿದ್ದಾರಂತೆ. ಆದರೆ ಹಸೀನ್ ಗೆ ಇದೀಗ ಶಮಿ ಎಲ್ಲಿದ್ದಾರೆಂಬ ಮಾಹಿತಿಯಿಲ್ಲ. ಈ ಬಗ್ಗೆ ಶಮಿ ಕುಟುಂಬದವರೂ ಯಾವುದೇ ಮಾಹಿತಿ ಬಿಟ್ಟುಕೊಡುತ್ತಿಲ್ಲ ಎಂದು ಹಸೀನ್ ಪರ ವಕೀಲರು ಮಾಧ್ಯಮಗಳಿಗೆ ಹೇಳಿದ್ದಾರೆ.
ಎಷ್ಟೇ ಕಿರುಕುಳ ಆರೋಪ ಹೊರಿಸಿದ್ದರೂ ತನ್ನ ಪತಿಗೆ ದೈಹಿಕವಾಗಿ ಗಾಯವಾಗುವುದು ಬೇಕಾಗಿರಲಿಲ್ಲ ಎಂದು ಹಸೀನ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದಾಗಿಯೂ ವರದಿಯಾಗಿದೆ. ಡೆಹ್ರಾಡೂನ್ ನಲ್ಲಿ ಭಾನುವಾರ ಶಮಿ ಅಪಘಾತಕ್ಕೀಡಾಗಿ ತಲೆಗೆ ಪೆಟ್ಟು ಮಾಡಿಕೊಂಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ