Select Your Language

Notifications

webdunia
webdunia
webdunia
webdunia

ಕ್ರಿಕೆಟಿಗ ಮೊಹಮ್ಮದ್ ಶಮಿ ಜತೆಗಿನ ‘ಸ್ನೇಹ’ದ ಬಗ್ಗೆ ಪಾಕ್ ಯುವತಿ ಹೇಳಿದ್ದೇನು?

ಕ್ರಿಕೆಟಿಗ ಮೊಹಮ್ಮದ್ ಶಮಿ ಜತೆಗಿನ ‘ಸ್ನೇಹ’ದ ಬಗ್ಗೆ ಪಾಕ್ ಯುವತಿ ಹೇಳಿದ್ದೇನು?
ಇಸ್ಲಾಮಾಬಾದ್ , ಮಂಗಳವಾರ, 20 ಮಾರ್ಚ್ 2018 (09:38 IST)
ಇಸ್ಲಾಮಾಬಾದ್: ಗೃಹ ಹಿಂಸೆ ಆರೋಪಕ್ಕೊಳಗಾಗಿರುವ ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ಪಾಕ್ ಮಹಿಳೆಗೆ ಹಣ ನೀಡಿದ ಆರೋಪ ಹೊರಿಸಿದ್ದರು. ಈ ಬಗ್ಗೆ ಸ್ವತಃ ಪಾಕ್ ಯುವತಿ ಇದೀಗ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಶಮಿ ಆಲಿಶ್ ಬಾ ಎನ್ನುವ ಯುವತಿಯನ್ನು ದುಬೈನಲ್ಲಿ ಭೇಟಿಯಾಗಿ ಹಣ ನೀಡಿದ್ದರು. ಇದು ಬಹುಶಃ ಮ್ಯಾಚ್ ಫಿಕ್ಸಿಂಗ್ ನ ಭಾಗವಾಗಿರಬಹುದು ಎಂದು ದೂರಿದ್ದರು. ಈ ಬಗ್ಗೆ ಇದೀಗ ಸ್ವತಃ ಆಲಿಶ್ ಬಾ ಮಾಧ್ಯಮಗಳೆದುರು ಸ್ಪಷ್ಟನೆ ನೀಡಿದ್ದಾರೆ.

‘ನಾನು ಮೊಹಮ್ಮದ್ ಶಮಿಯ ಲಕ್ಷಾಂತರ ಅಭಿಮಾನಿಗಳಲ್ಲಿ ಒಬ್ಬಳು. ಪಾಕಿಸ್ತಾನದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯವನ್ನು ಭಾರತ ಸೋತ ಮೇಲೆ ಇನ್ ಸ್ಟಾಗ್ರಾಂ ಮೂಲಕ ಅವರಿಗೆ ಮೆಸೇಜ್ ಮಾಡಿದ್ದೆ. ಪಾಕ್ ಪ್ರಜೆ ಮೆಸೇಜ್ ಮಾಡಿದ್ದಳೆಂಬ ಕಾರಣಕ್ಕೆ ಅವರೂ ಪ್ರತಿಕ್ರಿಯಿಸಿದ್ದರು.

ಹೀಗೇ ನಾವಿಬ್ಬರೂ ಸ್ನೇಹಿತರಾಗಿದ್ದೆವಷ್ಟೇ. ದುಬೈನಲ್ಲಿ ನನ್ನ ಸಂಬಂಧಿಕರ ಮನೆಯಿದೆ. ಅಲ್ಲಿಗೆ ಹೋಗಿದ್ದಾಗ ಶಮಿ ಅಲ್ಲಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಆಗ ಅವರನ್ನು ಹೋಟೆಲ್ ನಲ್ಲಿ ಭೇಟಿಯಾಗಿದ್ದೆ. ಅದು ಸೌಹಾರ್ದಯುತ ಭೇಟಿಯಾಗಿತ್ತು. ನಮ್ಮ ನಡುವೆ ಹಣಕಾಸಿನ ಯಾವುದೇ ವ್ಯವಹಾರ ನಡೆದಿಲ್ಲ. ಇಂತಹಾ ಆರೋಪಗಳೆಲ್ಲಾ ಸುಳ್ಳು’ ಎಂದು ಆಲಿಶ್ ಬಾ ಸ್ಷಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಬಳಗದ ಗೆಲುವಿನ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?