Select Your Language

Notifications

webdunia
webdunia
webdunia
webdunia

ಆಂಗ್ಲರ ನಾಡಿನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಚಾರಿತ್ರಿಕ ಸಾಧನೆ: ಭಾರತಕ್ಕೆ ಚೊಚ್ಚಲ ಟಿ20 ಸರಣಿ

Harmanpreet Kaur, India-England, Smriti Mandana

Sampriya

ಮ್ಯಾಂಚೆಸ್ಟರ್ , ಗುರುವಾರ, 10 ಜುಲೈ 2025 (14:32 IST)
Photo Credit X
ಮ್ಯಾಂಚೆಸ್ಟರ್: ಹರ್ಮನ್‌ಪ್ರೀತ್‌ ಕೌರ್ ನಾಯಕತ್ವದ ಭಾರತ ಮಹಿಳಾ ತಂಡವು ಚಾರಿತ್ರಿಕ ದಾಖಲೆ ನಿರ್ಮಿಸಿದೆ. ಆಂಗ್ಲರ ನಾಡಿನಲ್ಲಿ ಮೊದಲ ಬಾರಿ ಟಿ20 ಸರಣಿಯನ್ನು ಗೆದ್ದು ಬೀಗಿದೆ.

ಬುಧವಾರ ರಾತ್ರಿ ನಡದ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳಿಂದ ಗೆದ್ದಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 3–1 ಮುನ್ನಡೆ ಸಾಧಿಸಿದೆ. ಹರ್ಮನ್‌ಪ್ರೀತ್ ಪಡೆಯು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿಯನ್ನು ವಶಪಡಿಸಿಕೊಂಡಿದೆ.

ಡರ್ಬಿಯಲ್ಲಿ 2006ರಲ್ಲಿ ನಡೆದ ಏಕಮಾತ್ರ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದ್ದರೂ, ಅದಾದ ನಂತರ ನಡೆದ ಎಲ್ಲ ಉಭಯ ಸರಣಿಗಳಲ್ಲೂ (ತವರಿನ ಅಂಗಳ ಸೇರಿದಂತೆ) ಸೋಲನುಭವಿಸಿತ್ತು. ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್ ನಷ್ಟಕ್ಕೆ 126 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಯಿತು.

ಸುಲಭ ಗುರಿ ಬೆನ್ನಟ್ಟಿದ ಭಾರತ 17 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಭಾರತದ ಪರ ಸ್ಮೃತಿ ಮಂದಾನ (32), ಶೆಫಾಲಿ ವರ್ಮಾ (31), ಜೆಮಿಮಾ ರಾಡ್ರಿಗಸ್ (24*) ಹಾಗೂ ಹರ್ಮನ್‌ಪ್ರೀತ್ ಕೌರ್ (26) ಉಪಯುಕ್ತ ಕಾಣಿಕೆ ನೀಡಿದರು.

ಸರಣಿಯ ಮೊದಲೆರಡು ಪಂದ್ಯವನ್ನು ಗೆದ್ದಿದ್ದರೆ, ಮೂರನೇ ಪಂದ್ಯವನ್ನು ಇಂಗ್ಲೆಂಡ್‌ ತಂಡ ಜಯಿಸಿದೆ. ಸರಣಿಯ ಅಂತಿಮ ಪಂದ್ಯವು ಜುಲೈ 12ರಂದು ಎಜ್‌ಬಾಸ್ಟನ್‌ನಲ್ಲಿ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Viral video: ಈ ಹುಡುಗನ ಬೌಲಿಂಗ್ ಗೆ ನೀವೂ ಫಿದಾ ಆಗ್ಲೇಬೇಕು