Publish Date: Tue, 05 Mar 2019 (09:45 IST)
Updated Date: Tue, 05 Mar 2019 (09:47 IST)
ಮುಂಬೈ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಟ್ಯಾಟೂ ಶೋಕಿ ಇಂದು ನಿನ್ನೆಯದಲ್ಲ. ಅವರು ತಮ್ಮ ಮೈಮೆಲೆ ಹಾಕಿಸಿಕೊಂಡ ಟ್ಯಾಟೂನಿಂದ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಈ ಬಾರಿ ಹಾರ್ದಿಕ್ ಪಾಂಡ್ಯ ಕನ್ನಡ ಸೇರಿದಂತೆ ಒಟ್ಟು 16 ಭಾಷೆಗಳಲ್ಲಿ ಹಾರ್ದಿಕ್ ಎಂದು ತನ್ನ ಕೈ ಮೇಲೆ ಟ್ಯಾಟೂನಲ್ಲಿ ಬರೆಯಿಸಿಕೊಂಡು ಸುದ್ದಿಯಾಗಿದ್ದಾರೆ.
ಹಾರ್ದಿಕ್ ಟ್ಯಾಟೂ ಶೋಕಿ ನೋಡಿ ಟ್ವಿಟರಿಗರು ಅಣಕವಾಡಿದ್ದು, ಕೊನೆಗೂ ಹಾರ್ದಿಕ್ ಗೆ ತನ್ನ ಹೆಸರು ಬರೆಯಲು ಗೊತ್ತಾಗಿರಬೇಕು ಎಂದಿದ್ದಾರೆ. ಆದರೆ ಕನ್ನಡ, ತಮಿಳು ಸೇರಿದಂತೆ ಕೆಲವು ಭಾಷೆಗಳಲ್ಲಿ ತಮ್ಮ ಹೆಸರನ್ನು ಹಾರ್ದಿಕ್ ಎಂದು ಬರೆಯುವ ಬದಲು ‘ಹಾರ್ಡಿ’ ಎಂದು ಬರೆದಿದ್ದಕ್ಕೆ ಟ್ವಿಟರಿಗರು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.