Glenn Maxwell: ಮ್ಯಾಕ್ಸ್ ವೆಲ್ ರನ್ನು ಹರಾಜಿನಲ್ಲಿ ಕೈ ಬಿಟ್ಟಿದ್ದಕ್ಕೇ ಬಚಾವ್ ಎಂದ ಆರ್ ಸಿಬಿ ಫ್ಯಾನ್ಸ್

Krishnaveni K
ಮಂಗಳವಾರ, 15 ಏಪ್ರಿಲ್ 2025 (20:44 IST)
Photo Credit: X
ಮುಂಬೈ: ಈ ಬಾರಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಗೆ ಮುನ್ನ ಆಸೀಸ್ ಮೂಲದ ಗ್ಲೆನ್ ಮ್ಯಾಕ್ಸ್ ವೆಲ್ ರನ್ನು ಆರ್ ಸಿಬಿ ಕೈ ಬಿಟ್ಟಿತ್ತು. ಇದು ಆರ್ ಸಿಬಿ ಕೈಗೊಂಡ ಅತ್ಯುತ್ತಮ ನಿರ್ಧಾರ ಎಂದು ಇದೀಗ ಅಭಿಮಾನಿಗಳು ಅಭಿನಂದಿಸುತ್ತಾರೆ. ಯಾಕೆ ಇಲ್ಲಿದೆ ನೋಡಿ ವಿವರ.

ಕಳೆದ ಸೀಸನ್ ನಲ್ಲಿ ಆರ್ ಸಿಬಿಯಲ್ಲಿದ್ದಾಗಲೇ ಆಸ್ಟ್ರೇಲಿಯಾ ಹೊಡೆಬಡಿಯ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಕಡಿದು ಕಟ್ಟೆ ಹಾಕಿದ್ದು ಅಷ್ಟರಲ್ಲೇ ಇದೆ. ಹೆಸರಿಗಷ್ಟೇ ಹೊಡೆಬಡಿಯ ಆಟಗಾರ. ಆದರೆ ಆರ್ ಸಿಬಿಗೆ ಅವರಿಂದ ಯಾವುದೇ ಉಪಯೋಗವಾಗಿರಲಿಲ್ಲ.

ಹೀಗಾಗಿ ಕಳೆದ ಬಾರಿ ಹರಾಜಿಗೆ ಮುನ್ನ ಮ್ಯಾಕ್ಸ್ ವೆಲ್ ರನ್ನು ರಿಲೀಸ್ ಮಾಡಿದಾಗ ಆರ್ ಸಿಬಿ ಅಭಿಮಾನಿಗಳೇ ಖುಷಿಪಟ್ಟಿದ್ದರು. ಇದೀಗ ಪಂಜಾಬ್ ಕಿಂಗ್ಸ್ ಪರ ಐಪಿಎಲ್ ಆಡುತ್ತಿರುವ ಮ್ಯಾಕ್ಸ್ ವೆಲ್ ಬ್ಯಾಟಿಂಗ್ ಮಾಡುತ್ತಿರುವ ಚಂದ ನೋಡಿ ಅವರನ್ನು ಕೈ ಬಿಟ್ಟದ್ದೇ ಒಳ್ಳೇದಾಯ್ತು ಎಂದು ಆರ್ ಸಿಬಿ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

ಪಂಜಾಬ್ ತಂಡದಲ್ಲೂ ಇದುವರೆಗೆ ಮ್ಯಾಕ್ಸ್ ವೆಲ್ ಹೇಳಿಕೊಳ್ಳುವಂತಹ ರನ್ ಗಳಿಸಿಲ್ಲ. ಇಂದಿನ ಕೆಕೆಆರ್ ವಿರುದ್ಧದ ಪಂದ್ಯದಲ್ಲೂ  10 ಎಸೆತ ಎದುರಿಸಿ ಗಳಿಸಿದ್ದು ಕೇವಲ 7 ರನ್. ಪಂಜಾಬ್ ಇತ್ತೀಚೆಗಿನ ವರದಿ ಬಂದಾಗ 13 ಓವರ್ ಗಳಲ್ಲಿ 98 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು ಕುಂಟುತ್ತಿದೆ.

ಮ್ಯಾಕ್ಸ್ ವೆಲ್ ರ ಇಂದಿನ ಪ್ರದರ್ಶನ ನೋಡಿದ ಬಳಿಕ ಅಭಿಮಾನಿಗಳು ಆರ್ ಸಿಬಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಿಮಗಿಂತ ನಮ್ಮ ದೇಶದ ದೇಶೀಯ ಆಟಗಾರರೂ ಆಡ್ತಾರೆ ಎನ್ನುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಐಪಿಎಲ್ ನಲ್ಲಿ ಮಾಲಿಕರು ಏನೇನೋ ಪ್ರಶ್ನೆ ಕೇಳ್ತಾರೆ: ಕೆಎಲ್ ರಾಹುಲ್ ಬಿಚ್ಚಿಟ್ಟ ಸತ್ಯ

ಟೀಂ ಇಂಡಿಯಾ ಟೆಸ್ಟ್ ತಂಡ ಹಳ್ಳ ಹಿಡಿಸಿದ ಗೌತಮ್ ಗಂಭೀರ್ ಟೆಸ್ಟ್ ದಾಖಲೆ ಹೇಗಿತ್ತು ನೋಡಿ

IND vs SA: ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಯಾವಾಗ, ಎಲ್ಲಿ ಇಲ್ಲಿದೆ ವಿವರ

ಕೋಚ್ ಆಗಿ ಬಂದಾಗ ರಾಹುಲ್ ದ್ರಾವಿಡ್ ಹೇಳಿದ್ದ ಈ ಮಾತು ಗಂಭೀರ್ ಗೂ ಪಾಠವಾಗಬೇಕು

ಮುಂದಿನ ಸುದ್ದಿ
Show comments